ತಿರುವನಂತಪುರಂ: ಅಭ್ಯರ್ಥಿಗಳ ಮರಣದ ನಂತರ ಉಪಚುನಾವಣೆ ಘೋಷಿಸಲಾದ ಮೂರು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‍ಗಳಿಗೆ ಇಂದು(ಸೋಮವಾರ) ಮತದಾನ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ಶನಿವಾರ ಸಂಜೆ 6 ಗಂಟೆಗೆ ಮೂರು ವಾರ್ಡ್‍ಗಳಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿತ್ತು. ಮತ ಎಣಿಕೆ 13 ರಂದು ಬೆಳಿಗ್ಗೆ 10 ಗಂಟೆಗೆ ಆಯಾ ಎಣಿಕೆ ಕೇಂದ್ರಗಳಲ್ಲಿ ಪ್ರಾರಂಭವಾಗುತ್ತದೆ.
ತಿರುವನಂತಪುರಂ ಕಾಪೆರ್Çರೇಷನ್‍ನ ವಿಳಿಂಜಮ್, ಮಲಪ್ಪುರಂನ ಮೂತೇಡಮ್ ಪಂಚಾಯತ್‍ನ ಪೈಂಪಡಮ್ ಮತ್ತು ಎರ್ನಾಕುಳಂನ ಪಂಬಕ್ಕುಡ್ ಪಂಚಾಯತ್‍ನ ಓಣಂಕೂರ್ ವಾರ್ಡ್‍ಗಳಲ್ಲಿ ವಿಶೇಷ ಚುನಾವಣೆಗಳು ನಡೆಯಲಿವೆ ಎಂದು ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ತಿಳಿಸಿದ್ದಾರೆ.

