ಕಾಸರಗೋಡು: ಮಲಬಾರ್ ಜಿಲ್ಲೆ ಹಾಗೂ ಕರ್ನಾಟಕದ ವಿವಿಧ ಪ್ರದೇಶದಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನೆಲ್ಲಿಕುಂಜೆ ತಙಳ್ ಉಪ್ಪಾಪ ಉರುಸ್ ಬುಧವಾರ ಆರಂಭಗೊಂಡಿತು. ಉರುಸ್ ಸಮಿತಿಯ ಅಧ್ಯಕ್ಷ ಟಿ.ಎ. ಮಹಮೂದ್ ಹಾಜಿ ಕಲ್ಕಂಡಿ ಧ್ವಜಾರೋಹಣ ನಡೆಸಿದರು. ಖತೀಬ್ ಜಿ.ಎಸ್.ಅಬ್ದುಲ್ ರಹ್ಮಾನ್ ಮದನಿ ಪ್ರಾರ್ಥನೆ ನೆರವೇರಿಸಿದರು.
ಶಾಸಕ ಎನ್.ಎ ನೆಲ್ಲಿಕುನ್ನು, ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಕಟ್ಟಪಾಣಿ ಕುಞËಮು, ಹನೀಫ್ ಅಪ್ಪು, ಎನ್.ಎಂ.ಸುಬೈರ್, ನಗರಸಭೆ ಮಾಜಿ ಅಧ್ಯಕ್ಷ ಅಬ್ಬಾಸ್ ಬೀಗಂ,ಅಬ್ಬಾಸ್ ಕೋಲಂಕರ, ಎನ್.ಎ.ಇಕ್ಬಾಲ್, ಎ.ಅಬ್ದುಲ್ ರಹಮಾನ್, ಇ.ಗೋವಿಂದನ್ ನಾಯರ್, ಅರ್ಜುನ್ ತಾಯಲಂಗಡಿ, ಕಡಪುರಂ ಶ್ರೀ ಕುರುಂಬಾ ಭಗವತಿದೇವಸ್ಥಾನದ ಅಧ್ಯಕ್ಷ ಕೆ.ಮಾಧವನ್, ಪ್ರತಿನಿಧಿಗಳಾದ ಪಾಣನ್ ಕಾರ್ನವರ್, ಉಪ್ಪಾ ಕಾರ್ನವರ್, ಮುತ್ತೋತಿ ಆಯತರ್, ದಂಡೋಡಿ ಆಯತರ್, ಕಲ್ಲಟ್ರ ಮಾಹಿನ್ ಹಾಜಿ, ಯಹ್ಯಾ ತಳಂಗರ, ಬಿ.ಎಂ.ಅಶ್ರಫ್, ಕೆ.ಎನ್.ಉಮೇಶ್, ಬಶೀರ್ ಸ್ರ್ಯಾಂಕ್, ವೆಂಕಟರಮಣ ಹೊಳ್ಳ, ಎಂ.ಎ.ಲತೀಫ್, ಉಷಾ ಅರ್ಜುನನ್ ಮೊದಲಾದವರು ಉಪಸ್ಥಿತರಿದ್ದರು.
ಹನ್ನೊಂದು ದಿವಸಗಳ ಕಾಲ ನಡೆಯುವ ಧಾರ್ಮಿಕ ಉಪನ್ಯಾಸದಲ್ಲಿ ಹಲವು ಮಂದಿ ವಿದ್ವಾಂಸರು ಭಾಷಣ ಮಾಡಲಿದ್ದಾರೆ. ಕರ್ನಾಟಕ ಮತ್ತು ಕೇರಳದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಅತಿಥಿಗಳಾಗಿ ಭಾಗವಹಿಸುವರು.
ನೆಲ್ಲಿಕುಂಜೆಯ ಮುಹಿದ್ದೀನ್ ಜಮಾಅತ್ ಮಸೀದಿಯ ಅಂಗಳದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ತಙಳ್ ಉಪ್ಪಾಪ ಹೆಸರಲ್ಲಿ ಪ್ರತಿ ಎರಡು ವರ್ಷಗಳಿಗೆ ಒಂದುಬಾರಿ ಉರುಸ್ ನಡೆಯುತ್ತಿದೆ.

