HEALTH TIPS

EMI - ಆದಾಯದ ನಡುವಿನ ಅಸಮತೋಲನದಿಂದ ಸಾಲದ ಕೂಪಕ್ಕೆ ಬೀಳುತ್ತಿರುವ ಭಾರತೀಯ ಕುಟುಂಬಗಳು!

ಸುಮಾರು 35,000 - 65,000 ರೂ.ವರೆಗೆ ಸರಾಸರಿ ಮಾಸಿಕ ಆದಾಯದ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಒತ್ತಡಕ್ಕೆ ಒಳಗಾಗಿರುವವರು 28,000 ರಿಂದ 52,000 ರೂ. ರವರೆಗೆ ಮಾಸಿಕ ಕಂತಿನ ಸಾಲದ ಬಾಧ್ಯತೆಗಳನ್ನು ಹೊಂದಿರುತ್ತಾರೆ ಎಂದು ವರದಿಯೊಂದು ಹೇಳಿದೆ.

ಗಳಿಕೆ ಮತ್ತು ಮಾಸಿಕ ಸಾಲದ ಕಂತು ನಡುವೆ ಅತಿಯಾದ ಅಂತರದಿಂದಾಗಿ ಭಾರತೀಯ ಕುಟುಂಬಗಳ ಮೇಲೆ ಹಣಕಾಸು ಹೊರೆ ಅತಿಯಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ಹಣಕಾಸು ತಜ್ಞರ ನಿಯೋಗವು ಈ ಅಧ್ಯಯನ ನಡೆಸಿದೆ. ಸಮೀಕ್ಷೆ ನಡೆಸಿದವರಲ್ಲಿ ಶೇ 72ರಷ್ಟು ಮಂದಿ ಸಾಲದ ಡಿಫಾಲ್ಟ್ ಮತ್ತು ರಿಕವರಿ ಏಜೆಂಟ್ ಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಶೇ 67ರಷ್ಟು ಮಂದಿ ಸಾಲಗಾರರಿಂದ ಆಗಾಗ್ಗೆ ಕರೆಗಳು, ಬೈಗಳುಗಳನ್ನು ಪಡೆದಿದ್ದಾರೆ.

ಸುಮಾರು 35,000 - 65,000 ರೂ.ವರೆಗೆ ಸರಾಸರಿ ಮಾಸಿಕ ಆದಾಯದ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಒತ್ತಡಕ್ಕೆ ಒಳಗಾಗಿರುವವರು 28,000 ರಿಂದ 52,000 ರೂ. ರವರೆಗೆ ಮಾಸಿಕ ಕಂತಿನ ಸಾಲದ ಬಾಧ್ಯತೆಗಳನ್ನು ಹೊಂದಿರುತ್ತಾರೆ ಎಂದು ವರದಿಯೊಂದು ಹೇಳಿದೆ.

ಹೆಸರು ಹೇಳಲಿಚ್ಛಿಸದ ವಿನ್ಯಾಸಕ ವೃತ್ತಿಯಲ್ಲಿರುವ ಮಹಿಳೆಯೊಬ್ಬರ ಪ್ರಕಾರ, "ಕಳೆದ ಎರಡು ವರ್ಷಗಳಿಂದ ತಿಂಗಳ ಆದಾಯ 40,000 ರೂ.ಯಿಂದ 60,000 ರೂ. ನಡುವೆ ಇದೆ. ಆದರೆ ಮಾಸಿಕ ಸಾಲದ ಕಂತು 50,000 ರೂ.ಸಮೀಪವಿದೆ. ಹೀಗಾಗಿ ಸಾಲದ ಕಂತುಗಳನ್ನಷ್ಟೇ ಕಟ್ಟಲು ಸಾಧ್ಯವಾಗುತ್ತಿದೆಯೇ ವಿನಾ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ."

ಆದಾಯ ಮತ್ತು ಮಾಸಿಕ ಕಂತುವಿನ ಅನುಪಾತದಲ್ಲಿನ ಈ ಅಸಮತೋಲನದಿಂದಾಗಿ ಕೆಲವರು ಅನಧಿಕೃತ ಮೂಲಗಳಿಂದ ಸಾಲ ಮಾಡುವ ಒತ್ತಡಕ್ಕೆ ಬೀಳುತ್ತಿದ್ದಾರೆ. ಸಾಲದ ಜೊತೆಗೆ ಕ್ರೆಡಿಟ್ ಕಾರ್ಡ್ ರೊಟೇಶನ್, ಹೆಚ್ಚುವರಿ ಸಾಲಗಳು, ಸ್ನೇಹಿತರು ಮತ್ತು ಕುಟುಂಬದ ಬೆಂಬಲದ ಅಗತ್ಯವನ್ನು ತರುತ್ತಿದೆ.

ಈ ಮಾಧ್ಯಮದ ಜೊತೆಗೆ ಮಾತನಾಡಿದ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ, ಅವರ ಸ್ನೇಹಿತರೊಬ್ಬರು ಇಂತಹ ಸಾಲದ ಶೂಲಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಬಹಿರಂಗವಾಗಿ ಅವರು ಎಲ್ಲೂ ಸಾಲದ ಸಮಸ್ಯೆಯನ್ನು ತೋಡಿಕೊಂಡಿರಲಿಲ್ಲ.

ಸಮೀಕ್ಷೆಯಲ್ಲಿ ಕಂಡುಬಂದ ಆಘಾತಕಾರಿ ಮಾಹಿತಿ:

ಸಮೀಕ್ಷೆಯಲ್ಲಿ 10,000 ಜನರ ಅಭಿಪ್ರಾಯ ಕೇಳಲಾಗಿತ್ತು. 40,000 ರೂ.ಯಿಂದ 60,000 ರೂ. ನಡುವೆ ಆದಾಯ ಇರುವವರಿಗೆ 28,000 ದಿಂದ 52,000 ರೂ. ವರೆಗೆ ಸಾಲದ ಭಾಧ್ಯತೆಯಿತ್ತು. ಶೇ 72ರಷ್ಟು ಸಾಲಗಾರರು ಒಂದಲ್ಲ ಒಂದು ರೀತಿಯಲ್ಲಿ ಸಾಲವನ್ನು ಕಟ್ಟುವ ವಿಚಾರದಲ್ಲಿ ಕಿರುಕುಳವನ್ನು ಎದುರಿಸಿದ್ದಾರೆ. ಶೇ 67ರಷ್ಟು ಮಂದಿ ಆಗಾಗ್ಗೆ ಸಾಲಗಾರರಿಂದ ಬೈಗುಳದ ಕರೆಗಳನ್ನು ಸ್ವೀಕರಿಸಿದ್ದಾರೆ. ಈಗಲೇ ಸಾಲ ತೆಗೆದುಕೊಳ್ಳಿ ಎನ್ನುವ ತ್ವರಿತ ಸಾಲದ ಆಯಪ್ ಗಳಿಂದಾಗಿ ವೈಯಕ್ತಿಕ ಸಾಲ ಪಡೆದು ಕಂತುಗಳಲ್ಲಿ ಕಟ್ಟುವ ಅವಕಾಶ ನೀಡಿರುವುದು ಸಾಲ-ಸೋಲ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries