ನವದೆಹಲಿ: ಭಾರತ ಸರ್ಕಾರ ಎಲ್ಲ ರಾಜ್ಯಗಳಿಂದ 2025 ಡಿಸೆಂಬರ್ ತಿಂಗಳಿನ ಸರಕು ಸೇವಾ ತೆರಿಗೆ (GST) ಸಂಗ್ರಹಿಸಿದ್ದ ಮಾಹಿತಿ ಹೊರ ಬಿದ್ದಿದೆ. ಇದರಲ್ಲಿ ಅತ್ಯಧಿಕ ತೆರಿಗೆಯನ್ನು ಕೇಂದ್ರಕ್ಕೆ ನೀಡುವ ಪೈಕಿ ಕರ್ನಾಟಕ ಎಂದಿನಂತೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಪ್ರಥಮ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ಕೇರಳ ಹನ್ನೆರಡನೇ ಸ್ಥಾನದಲ್ಲಿದೆ.
ಹಾಗಾದರೆ ಯಾವೆಲ್ಲ ರಾಜ್ಯಗಳಿಂದ ಎಷ್ಟೆಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ರಾಜ್ಯಗಳಿಂದ ಕೇಂದ್ರ ಸಂಗ್ರಹಿಸಿದ ಸರಕು ಸೇವಾ ತೆರಿಗೆಯಲ್ಲಿ ಈ ಬಾರಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ. ಭಾರತದ ಜಿಎಸ್‌ಟಿ ಸಂಗ್ರಹವು ಡಿಸೆಂಬರ್ 2025 ರಲ್ಲಿ ಶೇಕಡಾ 6.1 ರಷ್ಟು ಹೆಚ್ಚಳವಾಗಿದೆ. ಅಂದರೆ 1,74,550 ಕೋಟಿ ರೂ.ಗಳಿಗೆ ಜಿಎಸ್‌ಟಿ ಸಂಗ್ರಹ ತಲುಪಿದ್ದು, ಹಿಂದಿನ ವರ್ಷದ (2024 ಡಿಸೆಂಬರ್) ಇದೇ ತಿಂಗಳಿನಲ್ಲಿ ಇದು 1,64,556 ಕೋಟಿ ರೂ.ಗಳಷ್ಟಿತ್ತು ಎಂದು ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ಮಾಹಿತಿ ನೀಡಿವೆ.
ಮಹಾರಾಷ್ಟ್ರ ರಾಜ್ಯದಿಂದ ಕೇಂದ್ರಕ್ಕೆ 16,140 ಕೋಟಿ ರೂಪಾಯಿ ಜಿಎಸ್‌ಟಿ ತೆರಿಗೆ ಪಾವತಿಯಾಗಲಿದ್ದು, ಇಡೀ ದೇಶದಲ್ಲಿ ಅತ್ಯಧಿಕ ಜಿಎಸ್‌ಟಿ ಕಟ್ಟುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲಿದೆ. ಇನ್ನೂ 6,716 ಕೋಟಿ ರೂ. ನೀಡುವ ಮೂಲಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 6,671 ಕೋಟಿ ಉತ್ತರ ಪ್ರದೇಶ ಇದೆ.
ಪ್ರತಿ ಭಾರಿ ಆಯಾ ರಾಜ್ಯಗಳ ತೆರಿಗೆ ಹಂಚಿಕೆ ವೇಳೆ ಕೇಂದ್ರ ಇತರ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಕಡಿಮೆ ನೀಡುತ್ತದೆ. ರಾಜ್ಯಕ್ಕೆ ತೆರಿಗೆ ಹಂಚಿಕೆ ಪಾಲಿನಲ್ಲಿ ಖೋತಾ ಆಗಿದೆ. ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತದೆ ಎಂದು ಈ ಹಿಂದೆ ಕೆಲವು ಬಾರಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. 2026ರಲ್ಲಿ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಈ ಬಾರಿ ಎಷ್ಟು ಪಾಲು ಸಿಗಲಿದೆ ಎಂಬ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ರಾಜ್ಯವಾರು ಜಿಎಸ್‌ಟಿ ಸಂಗ್ರಹವಾದ ಪಟ್ಟಿ
ಮಹಾರಾಷ್ಟ್ರ : 16,140 ಕೋಟಿ ರೂಪಾಯಿ
ಉತ್ತರ ಪ್ರದೇಶ : 6,671 ಕೋಟಿ ರೂಪಾಯಿ
ಕರ್ನಾಟಕ : 6,716 ಕೋಟಿ ರೂಪಾಯಿ
ಗುಜರಾತ್ : 6,351 ಕೋಟಿ ರೂಪಾಯಿ
ತಮಿಳುನಾಡು : 5,992 ಕೋಟಿ ರೂಪಾಯಿ
ಪಶ್ಚಿಮ ಬಂಗಾಳ : 3,559 ಕೋಟಿ ರೂಪಾಯಿ
ತೆಲಂಗಾಣ : 3,552 ಕೋಟಿ ರೂಪಾಯಿ
ರಾಜಸ್ಥಾನ : 3,455 ಕೋಟಿ ರೂಪಾಯಿ
ಹರಿಯಾಣ : 3,629 ಕೋಟಿ ರೂಪಾಯಿ
ದೆಹಲಿ : 2,684 ಕೋಟಿ ರೂಪಾಯಿ
ಆಂಧ್ರಪ್ರದೇಶ : 2,652 ಕೋಟಿ ರೂಪಾಯಿ
ಕೇರಳ : 2,643 ಕೋಟಿ ರೂಪಾಯಿ
ಬಿಹಾರ : 2,435 ಕೋಟಿ ರೂಪಾಯಿ
ಒಡಿಶಾ : 1,691 ಕೋಟಿ ರೂಪಾಯಿ
ಅಸ್ಸಾಂ : 1,221 ಕೋಟಿ ರೂಪಾಯಿ
ಮಧ್ಯಪ್ರದೇಶ : 2,780 ಕೋಟಿ ರೂಪಾಯಿ
ಪಂಜಾಬ್ : 1,966 ಕೋಟಿ ರೂಪಾಯಿ
ಜಾರ್ಖಂಡ್ : 916 ಕೋಟಿ ರೂಪಾಯಿ
ಉತ್ತರಾಖಂಡ : 757 ಕೋಟಿ ರೂಪಾಯಿ
ಛತ್ತೀಸ್‌ಗಢ : 907 ಕೋಟಿ ರೂಪಾಯಿ
ಜಮ್ಮು ಮತ್ತು ಕಾಶ್ಮೀರ : 592 ಕೋಟಿ ರೂಪಾಯಿ
ಹಿಮಾಚಲ ಪ್ರದೇಶ : 482 ಕೋಟಿ ರೂಪಾಯಿ
ಗೋವಾ : 365 ಕೋಟಿ ರೂಪಾಯಿ
ಚಂಡೀಗಢ :188 ಕೋಟಿ ರೂಪಾಯಿ
ಅರುಣಾಚಲ ಪ್ರದೇಶ : 146 ಕೋಟಿ ರೂಪಾಯಿ
ಮೇಘಾಲಯ : 139 ಕೋಟಿ ರೂಪಾಯಿ
ತ್ರಿಪುರ : 124 ಕೋಟಿ ರೂಪಾಯಿ
ಪುದುಚೇರಿ : 109 ಕೋಟಿ ರೂಪಾಯಿ
ಸಿಕ್ಕಿಂ : 92 ಕೋಟಿ ರೂಪಾಯಿ
ನಾಗಾಲ್ಯಾಂಡ್ : 88 ಕೋಟಿ ರೂಪಾಯಿ
ಮಣಿಪುರ : 79 ಕೋಟಿ ರೂಪಾಯಿ
ಮಿಜೋರಾಂ :74 ಕೋಟಿ ರೂಪಾಯಿ
ಅಂಡಮಾನ್ ಮತ್ತು ನಿಕೋಬಾರ್ : 57 ಕೋಟಿ ರೂಪಾಯಿ
ಲಡಾಖ್ :53 ಕೋಟಿ ರೂಪಾಯಿ
ಲಕ್ಷದ್ವೀಪ :08 ಕೋಟಿ ರೂಪಾಯಿ
ಇತರ ಪ್ರದೇಶ:160 ಕೋಟಿ ರೂಪಾಯಿ
(ರಾಜ್ಯವಾರು ಜಿಎಸ್‌ಟಿ ಸಂಗ್ರಹದ ಪಟ್ಟಿ ಕೃಪೆ: ಇಂಡಿಯನ್ ಟೆಕ್‌ಗೈಡ್ ಎಕ್ಸ್ ಖಾತೆ)

