ಮಧುರೈ: ತಮಿಳುನಾಡಿನ ತಿರುಪ್ಪರಕುಂದ್ರ ಬೆಟ್ಟದಲ್ಲಿ 'ದೀಪತ್ತೂಣ್' ಬೆಳಗಲು ಅವಕಾಶ ನೀಡಿದ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಎತ್ತಿ ಹಿಡಿದಿದೆ.
ದೀಪತ್ತೂಣ್ (ದೀಪಸ್ತಂಭ) ಇರುವ ಸ್ಥಳವು ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸೇರಿದ್ದು ಎಂದೂ ನ್ಯಾಯಮೂರ್ತಿಗಳಾದ ಜಿ.
ಜಯಚಂದ್ರನ್ ಹಾಗೂ ಕೆ.ಕೆ ರಾಮಕೃಷ್ಣನ್ ಅವರಿದ್ದ ಪೀಠ ತೀರ್ಪಿನಲ್ಲಿ ಹೇಳಿದೆ.
ಇದು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಿಗೆ ಸಂದ ಜಯ ಎಂದು ಅರ್ಜಿದಾರ ರಾಮ ರವಿಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

