ಇರಾನಿಗೆ ರಫ್ತು ಒಪ್ಪಂದಗಳಿಗೆ ಸಂಬಂಧಿಸಿದ ಅಪಾಯಗಳನ್ನು ಮರುಮೌಲ್ಯಮಾಪನ ಮಾಡುವಂತೆ ಹಾಗೂ ಸುರಕ್ಷಿತ ಪಾವತಿ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಐಆರ್‌ಇಎಫ್ ರಫ್ತುದಾರರಿಗೆ ಆಗ್ರಹಿಸಿದೆ. ಜೊತೆಗೆ ಇರಾನ್ ಮಾರುಕಟ್ಟೆಗಾಗಿ ಅತಿಯಾದ ದಾಸ್ತಾನು ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದೆ.
ಭಾರತವು ವಿತ್ತವರ್ಷ 2025-26ರ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಇರಾನಿಗೆ 468.10 ಮಿ.ಡಾ. ಮೌಲ್ಯದ 5.99 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದೆ.

