HEALTH TIPS

Kite Festival: ಜರ್ಮನ್ ಚಾನ್ಸೆಲರ್‌ ಜೊತೆಯಲ್ಲಿ ಗಾಳಿಪಟ ಹಾರಿಸಿದ ಪ್ರಧಾನಿ ಮೋದಿ

ಅಹಮದಾಬಾದ್‌: ಸಬರಮತಿ ನದಿ ದಂಡೆಯಲ್ಲಿ ಜರುಗುತ್ತಿರುವ 'ಅಂತರರಾಷ್ಟ್ರೀಯ ಗಾಳಿಪಟ ಉತ್ಸವ - 2026' ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. 

ಗಾಳಿಪಟ ಉತ್ಸವದ ವೇಳೆ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿದರು.

ತೆರೆದ ವಾಹನದಲ್ಲಿ ಸಾಗುತ್ತ ಮೋದಿ ಹಾಗೂ ಮೆರ್ಜ್‌ ಅವರು ಗಾಳಿಪಟ ಹಾರಿಸಿದರು.

ಈ ವೇಳೆ ಉಭಯ ದೇಶಗಳ ನಾಯಕರು ಗಾಳಿಪಟ ತಯಾರಿಸುವ ಮಹಿಳಾ ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು.

ರಾಜ್ಯ ಸರ್ಕಾರವು ಆಯೋಜಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾರತದ 1,000 ಉತ್ಸಾಹಿಗಳು ಹಾಗೂ 50 ದೇಶಗಳ 135 ಮಂದಿ ಭಾಗಿಯಾಗಿದ್ದಾರೆ. ಜ.14ರ ವರೆಗೆ ಇದು ಮುಂದುವರಿಯಲಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.

ಮಕರ ಸಂಕ್ರಾತಿಗೂ ಮುನ್ನ ಪ್ರತಿವರ್ಷವೂ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ವೀಕ್ಷಿಸಲು ಕಳೆದ ವರ್ಷ 3.83 ಲಕ್ಷ ಜನರು ಭೇಟಿ ನೀಡಿದ್ದರು. ಈ ವರ್ಷ 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದೆ.

ಗಾಳಿಪಟ ಉತ್ಸವಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಫ್ರೆಡ್ರಿಕ್ ಮೆರ್ಜ್ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries