ಮೊಬೈಲ್ನಲ್ಲಿ ಏನೇನೋ ಸರ್ಚ್ ಮಾಡುವ ದೊಡ್ಡ ವರ್ಗವೇ ಇದೆ. ಇದನ್ನು ಸರ್ಚ್ ಮಾಡಬೇಡಿ ಎಂದು ಹೇಳಿದರೂ, ಇನ್ನಷ್ಟು ಕುತೂಹಲದಿಂದ ಅದನ್ನೇ ಸರ್ಚ್ ಮಾಡುವವರು ಇದ್ದೇ ಇರುತ್ತಾರೆ. ಹೀಗೆ ಸರ್ಚ್ ಮಾಡಿದ ಬಳಿಕ ಗೂಗಲ್ ಕ್ರೋಮ್ನ ಹಿಸ್ಟರಿಗೆ ಹೋಗಿ ನೋಡಿದ್ದೆಲ್ಲಾ ಡಿಲೀಟ್ ಮಾಡ್ತೀರಾ.
ಅಬ್ಬಾ ಅಂತೂ ಎಲ್ಲಾ ಡಿಲೀಟ್ ಆಯ್ತು ಎಂದು ಖುಷಿ ಪಟ್ಟುಕೊಂಡಿರ್ತೀರಾ. ಆದರೆ ನೀವು ನೋಡಿದ್ದೆಲ್ಲವೂ ಸರ್ವರ್ನಲ್ಲಿ ಸೇವ್ ಆಗಿಯಂತೂ ಇದ್ದೇ ಇರುತ್ತದೆ. ಆದರೆ ನಿಮ್ಮ ಫೋನ್ ಬೇರೆ ಯಾರಾದರೂ ತೆಗೆದುಕೊಂಡು ನೀವು ಡಿಲೀಟ್ ಮಾಡಿದ್ದನ್ನೂ ನೋಡಬಹುದು ಎನ್ನೋದು ನಿಮಗೆ ಗೊತ್ತಾ?
ಡಿಲೀಟ್ ಮಾಡಿದ್ರೂ ಆಗಲ್ಲ
ಹೌದು. ನೀವು Mobile history clear ಮಾಡಿದ ಖುಷಿಯಲ್ಲಿ ಇದ್ದರೂ, ನಿಮ್ಮ ಮೊಬೈಲ್ ನಿಮ್ಮ ಮನೆಯವರ, ಸ್ನೇಹಿತರ ಅಥವಾ ಇನ್ನಾರದ್ದೋ ಕೈಗೆ ಸಿಕ್ಕರೆ, ಯಾವಾಗ ಏನು ನೋಡಿದ್ದೀರಿ ಎಲ್ಲವನ್ನೂ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗಿದ್ದರೆ, ನಿಮ್ಮ ಮೊಬೈಲ್ನಲ್ಲಿ ನೀವು ನೋಡಿದ್ದೆಲ್ಲವನ್ನೂ ಪರ್ಮನೆಂಟ್ ಆಗಿ ಡಿಲೀಟ್ ಮಾಡೋದು ಹೇಗಪ್ಪಾ ಎಂದು ಚಿಂತೆ ಮಾಡ್ತಿದ್ರೆ ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮೆಥಡ್.
ಹಂತ ಹಂತದ ಮಾಹಿತಿ ಇಲ್ಲಿದೆ:
* ಮೊದಲಿಗೆ ಪ್ಲೇಸ್ಟೋರ್ಗೆ ಹೋಗಿ.
* ಬಲ ತುದಿಯಲ್ಲಿ ಇರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
* ಮ್ಯಾನೇಜ್ ಯುವರ್ ಅಕೌಂಟ್ (Manage your account) ಮೇಲೆ ಕ್ಲಿಕ್ ಮಾಡಿ.
* ಡಾಟಾ ಆಯಂಡ್ ಪ್ರೈವಸಿ ಮೇಲೆ ಕ್ಲಿಕ್ ಮಾಡಿ.
* ಮೈ ಆಯಕ್ಟಿವಿಟಿಗೆ ಹೋದಾಗ ನೀವು ಯಾವಾಗ ಏನು ಸರ್ಚ್ ಮಾಡಿದ್ರಿ ಎಲ್ಲವೂ ಕಾಣಿಸುತ್ತದೆ.
* ಕೆಳಗೆ ಬಲತುದಿಯಲ್ಲಿ ಡಿಲೀಟ್ ಎಂದು ಇದೆ. ಅದರ ಮೇಲೆ ಕ್ಲಿಕ್ ಮಾಡಿ.
* ಅಲ್ಲಿ ನಿಮಗೆ ಕೊನೆಯ ಒಂದು ಗಂಟೆ, ಒಂದು ದಿನ, Always, custom range ಎಂದೆಲ್ಲಾ ಸಿಗುತ್ತದೆ.
* Always ಮೇಲೆ ಕ್ಲಿಕ್ ಮಾಡಿದ್ರೆ ಎಲ್ಲವೂ ಡಿಲೀಟ್ ಆಗುತ್ತದೆ. Custom Range ನಲ್ಲಿ ಯಾವ ದಿನದ್ದು ಬೇಕು ಎನ್ನುವ ಡೇಟ್ ಕೊಟ್ಟರೆ ಡಿಲೀಟ್ ಮಾಡಬಹುದು.
* ಬಳಿಕ Next ಮೇಲೆ ಕ್ಲಿಕ್ ಮಾಡಿ.
* Delete ಮೇಲೆ ಒತ್ತಿ.

