ವಾಟ್ಸಾಪ್ನಲ್ಲಿ ಹೊಸ ಫೀಚರ್‌ಗಳ ಅಬ್ಬರದೊಂದಿಗೆ ಹೊ ವರ್ಷವನ್ನು ಆರಂಭಿಸಿದೆ. ವಾಟ್ಸಾಪ್ ತಮ್ಮ ಬಳಕೆದಾರರಿಗೆ ಹೊಸದಾಗಿ Tags, Text Stickers ಮತ್ತು Event Reminders ಎಂಬ ಫೀಚರ್ಗಳನ್ನು ಪರಿಚಯಿಸಿದೆ. ಇದು ಪ್ರಸ್ತುತ ಕೇವಲ ಗ್ರೂಪ್ ಚಾಟ್ಗಳಿಗೆ ಮಾತ್ರ ಲಭ್ಯವಿದ್ದು ಚಾಟ್‌ಗಳು ಇನ್ನಷ್ಟು ಸುಲಭವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್ (WhatsApp) ಇದನ್ನು ನೆನ್ನೆ ಅಂದ್ರೆ 7ನೇ ಜನವರಿ 2026 ರಂದು ಈ ಅದ್ಭುತವಾದ ಹೊಸ ಬದಲಾವಣೆಗಳನ್ನು ಪ್ರಕಟಿಸಲಾಗಿದೆ. ಮೆಟಾ ಒಡೆತನದ ಈ ವಾಟ್ಸಾಪ್ ಈ ಹೊಸ 2026 ವರ್ಷದಲ್ಲಿ ಸಂಸ್ಥೆಯು ಈ ಇಂಟ್ರೆಸ್ಟಿಂಗ್ ಫೀಚರ್‌ಗಳನ್ನು ಪರಿಚಯಿಸುತ್ತಿದೆ ಇವುಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
WhatsApp Member Tags ವಾಟ್ಸಾಪ್ ಗ್ರೂಪ್ ಚಾಟ್‌ಗಳಿಗಾಗಿ ಹೊಸ ಫೀಚರ್:
ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿರುವ ಸದಸ್ಯರ ಹೆಸರಿಗೆ ಕಸ್ಟಮ್ ಟ್ಯಾಗ್ಗಳನ್ನು ಸೇರಿಸಲು ಈ ವೈಶಿಷ್ಟ್ಯವು ಉಪಯುಕ್ತವಾಗಿದೆ. ಇದು ಗ್ರೂಪ್ ಸದಸ್ಯರನ್ನು ಗುರುತಿಸುವುದನ್ನು ಸುಲಭಗೊಳಿಸುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದರ ಮೂಲಕ ಕಂಪನಿಯು ಈ ಹೊಸ ವೈಶಿಷ್ಟ್ಯದ ಕುರಿತು ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತದೆ. ಈ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಸದಸ್ಯರ ಟ್ಯಾಗ್‌ಗಳು (WhatsApp Member Tags):
ವಾಟ್ಸಾಪ್ ಗ್ರೂಪ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಇನ್ನು ಮುಂದೆ ತಮ್ಮ ಹೆಸರಿನ ಜೊತೆಗೆ ಒಂದು ವಿಶೇಷ ‘ಟ್ಯಾಗ್’ ಅಥವಾ ಗುರುತನ್ನು ಸೇರಿಸಬಹುದು. ಇದು ಆ ಗುಂಪಿನಲ್ಲಿ ನಿಮ್ಮ ಪಾತ್ರವೇನು ಅಥವಾ ನಿಮ್ಮ ವಿಶೇಷತೆ ಏನು ಎಂದು ಇತರರಿಗೆ ತಿಳಿಸಲು ಸಹಾಯ ಮಾಡುತ್ತದೆ. ವಿಶೇಷವೆಂದರೆ ನೀವು ಪ್ರತಿ ಗುಂಪಿಗೂ ಬೇರೆ ಬೇರೆ ಟ್ಯಾಗ್ ಇಟ್ಟುಕೊಳ್ಳಬಹುದು. ಉದಾಹರಣೆಗೆ ಫ್ಯಾಮಿಲಿ ಗ್ರೂಪ್‌ನಲ್ಲಿ ನೀವು “ಅಪ್ಪ” ಅಥವಾ “ಅಣ್ಣ” ಎಂದು ಟ್ಯಾಗ್ ಹಾಕಿಕೊಂಡರೆ ಫ್ರೆಂಡ್ಸ್ ಜೊತೆಗಿನ ಫುಟ್‌ಬಾಲ್ ಗ್ರೂಪ್‌ನಲ್ಲಿ “ಗೋಲ್ಕೀಪರ್” ಎಂದು ಟ್ಯಾಗ್ ನೀಡಬಹುದು. ಈ ಸೌಲಭ್ಯವು ಸದ್ಯದಲ್ಲೇ ಎಲ್ಲರಿಗೂ ಲಭ್ಯ ವಸ್ತು.
ಟೆಕ್ಸ್ಟ್ ಸ್ಟಿಕ್ಕರ್‌ಗಳು (Text Stickers):
ಈಗ ಸ್ಟಿಕ್ಕರ್‌ಗಳನ್ನು ಹುಡುಕುವ ಕೆಲಸ ತಪ್ಪಿತು! ನೀವು ಟೈಪ್ ಮಾಡುವ ಯಾವುದೇ ಪದವನ್ನು ತಕ್ಷಣವೇ ಸ್ಟಿಕ್ಕರ್ ಆಗಿ ಬದಲಾಯಿಸುವ ಫೀಚರ್ ಆಗಿದೆ. ನೀವು ಸ್ಟಿಕ್ಕರ್ ಸರ್ಚ್ ಬಾರ್‌ನಲ್ಲಿ ಯಾವುದಾದರೂ ಪದ ಟೈಪ್ ಮಾಡಿದರೆ ಅದು ಸುಂದರವಾದ ಸ್ಟಿಕ್ಕರ್ ರೂಪದಲ್ಲಿ ಕಾಣುತ್ತದೆ. ಇದನ್ನು ನೀವು ನೇರವಾಗಿ ಚಾಟ್‌ನಲ್ಲಿ ಬಳಸಬಹುದು ಅಥವಾ ನಿಮ್ಮ ನೆಚ್ಚಿನ ಸ್ಟಿಕ್ಕರ್ ಪ್ಯಾಕ್‌ಗಳಿಗೆ ಸೇರಿಸಿಕೊಳ್ಳಬಹುದು.
ಈವೆಂಟ್ ರಿಮೈಂಡರ್‌ಗಳು (Event Reminders):
ವಾಟ್ಸಾಪ್ ಗ್ರೂಪ್‌ನಲ್ಲಿ ಪಾರ್ಟಿ, ಮೀಟಿಂಗ್ ಅಥವಾ ಯಾವುದೇ ಕಾರ್ಯಕ್ರಮದ ಬಗ್ಗೆ ‘ಈವೆಂಟ್’ ಕ್ರಿಯೇಟ್ ಮಾಡಿದೆ ಅದಕ್ಕೆ ಸರಿಯಾದ ಸಮಯಕ್ಕೆ ರಿಮೈಂಡರ್ ಸೆಟ್ ಮಾಡಬಹುದು. ಈ ಕಾರ್ಯಕ್ರಮಕ್ಕೆ ಬರಬೇಕಾದವರು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಲು ಅಥವಾ ಆನ್‌ಲೈನ್ ಕರೆಗಳಿಗೆ ಹಾಜರಾಗಲು ಸುಲಭವಾಗುತ್ತದೆ. ವಾಟ್ಸಾಪ್ನಲ್ಲಿ ಈವೆಂಟ್ ಕ್ರಿಯೇಟ್ ಮಾಡುವುದು ಯಾರೆಲ್ಲಾ ಬರುತ್ತಾರೆ (RSVP) ಎಂದು ತಿಳಿಯುವುದು ಮತ್ತು ಈವೆಂಟ್ ಅನ್ನು ಪಿನ್ ಮಾಡಿ ಇಡುವ ಸೌಲಭ್ಯವಿದೆ ಈಗ ರಿಮೈಂಡರ್ ಸೇರಿರುವುದು ಇನ್ನೂ ಅನುಕೂಲಕರವಾಗಿದೆ. ಇದಲ್ಲದೆ ಇನ್ಸ್ಟಾಗ್ರಾಮ್ (Instagram) ಮುಖ್ಯಸ್ಥರು ಇತ್ತೀಚೆಗೆ ಮಾಹಿತಿ ನೀಡುತ್ತಾ AI ಮೂಲಕ ತಯಾರಿಸಿದ ಚಿತ್ರಗಳು ಇನ್‌ಸ್ಟಾಗ್ರಾಮ್ ವೇಗವಾಗಿ ಬೆಳೆಯಲು ಮತ್ತು ಬದಲಾಗಲು ದೊಡ್ಡ ಕಾರಣವನ್ನು ಸೂಚಿಸುತ್ತದೆ.

