HEALTH TIPS

WhatsApp ನಿಂದ ಹೊಸ ಫೀಚರ್ಸ್‌ ಘೋಷಣೆ; ಇದು ಸೈಬರ್ ದಾಳಿಗಳಿಂದ ನೀಡಲಿದೆ ಹೆಚ್ಚಿನ ಸುರಕ್ಷತೆ

 ಜನಪ್ರಿಯ ಮೆಸೆಜಿಂಗ್ ಆಪ್‌ WhatsApp ತನ್ನ ಬಳಕೆದಾರರ ಮಾಹಿತಿಗಳಿಗೆ ಹೆಚ್ಚಿನ ಸುರಕ್ಷತೆಗಳನ್ನು ನೀಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ವಾಟ್ಸಾಪ್‌ ಆನ್‌ಲೈನ್ ಬೆದರಿಕೆಗಳ ವಿರುದ್ಧ ಬಳಕೆದಾರರಿಗೆ ಸುರಕ್ಷತೆ ಒದಗಿಸಲು ವಿನ್ಯಾಸಗೊಳಿಸಲಾದ ಹೊಸ ಭದ್ರತಾ ಫೀಚರ್ಸ್‌ಗಳನ್ನು ವಾಟ್ಸಾಪ್ ಘೋಷಿಸಿದೆ. ಈ ನೂತನ ಸುರಕ್ಷತಾ ಆಯ್ಕೆಯನ್ನು Strict Account Settings ಎಂದು ಕರೆಯಲಾಗುತ್ತದೆ. ಇದು ಉದ್ದೇಶಿತ ಬಳಕೆದಾರರ ಖಾತೆಯನ್ನು ನಿರ್ಬಂಧಿತ ಸೆಟ್ಟಿಂಗ್‌ಗೆ ಲಾಕ್ ಮಾಡುತ್ತದೆ. ಅವರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇಲ್ಲದ ವ್ಯಕ್ತಿಗಳಿಂದ ಸ್ವೀಕರಿಸಿದ ಅಟ್ಯಾಚ್‌ಮೆಂಟುಗಳನ್ನು ಮತ್ತು ಇತರ ಮಾಧ್ಯಮಗಳನ್ನು ನಿರ್ಬಂಧಿಸುವ ಆಯ್ಕೆ ಇದಾಗಿದೆ ಎನ್ನಲಾಗಿದೆ. 


WhatsApp ಆಪ್‌ನಲ್ಲಿ ಹೊಸ ಸುರಕ್ಷತ ಫೀಚರ್‌ ಆಯ್ಕೆ

ಮೆಟಾ ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಇದೀಗ Strict Account Settings ಎಂಬ ಹೊಸ ಆಯ್ಕೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ. ವಾಟ್ಸಾಪ್ ತನ್ನ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ಈ ಕಟ್ಟುನಿಟ್ಟಾದ ಖಾತೆ ಸೆಟ್ಟಿಂಗ್‌ಗಳನ್ನು ವಿಶೇಷವಾಗಿ ಸೈಬರ್ ದಾಳಿಗಳ ಅಪಾಯ ಹೆಚ್ಚಿರುವ ಪತ್ರಕರ್ತರು ಹಾಗೂ ಸಾರ್ವಜನಿಕ ಸಂಪರ್ಕದಲ್ಲಿರುವ ವ್ಯಕ್ತಿಗಳ ಸುರಕ್ಷತೆಗಾಗಿ ರೂಪಿಸಲಾಗಿದೆ. ಬಳಕೆದಾರರು ಈ ಆಯ್ಕೆಯನ್ನು ಆಕ್ಟಿವ್ ಮಾಡಿದರೆ, WhatsApp ಖಾತೆಯಲ್ಲಿ ಒಂದು ರೀತಿಯ ಲಾಕ್‌ಡೌನ್ ಮೋಡ್ ಆನ್ ಆಗುತ್ತದೆ. ಇದರಿಂದ ಅಪ್ಲಿಕೇಶನ್‌ನ ಕೆಲವು ಕಾರ್ಯಗಳು ಸೀಮಿತವಾಗಿದ್ದು, ಬಳಕೆದಾರರ ಖಾತೆಗೆ ಹೆಚ್ಚುವರಿ ಭದ್ರತೆ ಒದಗಿಸುತ್ತದೆ.

ವಾಟ್ಸಾಪ್‌ನ ಹೊಸ Strict Account Settings ಆಯ್ಕೆಯು ಬಿಡುಗಡೆ ಹಂತದಲ್ಲಿದೆ. ಹೀಗಾಗಿ ಸದ್ಯ ಎಲ್ಲ ಬಳಕೆದಾರರಿಗೆ ಈ ಆಯ್ಕೆ ತಕ್ಷಣ ಲಭ್ಯ ಇರುವುದಿಲ್ಲ. ಈ ಆಯ್ಕೆಯು ಎಲ್ಲರಿಗೂ ಲಭ್ಯವಾದ ಬಳಿಕ ಫೀಚರ್ಸ್‌ ಅನ್ನು ಸೆಟ್ ಮಾಡಬಹುದು. ಅದಕ್ಕಾಗಿ ಬಳಕೆದಾರರು WhatsApp ಆಪ್‌ನಲ್ಲಿ Settings > Privacy > Advanced inside ಆಯ್ಕೆಗೆ ಹೋಗುವ ಮೂಲಕ ಅದನ್ನು ಸಕ್ರಿಯ ಮಾಡಬಹುದು. ಅಂದಾಹಗೆ Strict Account Settings ಸಂಭಾಷಣೆಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿಡಲು WhatsApp ನ ನಿರಂತರ ಪ್ರಯತ್ನವನ್ನು ತೋರಿಸುತ್ತದೆ.

ಸೈಬರ್ ದಾಳಿಗಳು ಹಾಗೂ ಸ್ಪೈವೇರ್‌ಗಳಿಂದ ಹೆಚ್ಚಿದ ಅಪಾಯ ಎದುರಿಸುತ್ತಿರುವ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ವಾಟ್ಸಾಪ್‌ ತನ್ನ ಇತ್ತೀಚಿನ ಅಪ್‌ಡೇಟ್‌ ಭಾಗವಾಗಿ Strict Account Settings ಆಯ್ಕೆಯನ್ನು ಲಭ್ಯ ಮಾಡಲಿದೆ. ಈ ಹೊಸ ಭದ್ರತಾ ಆಯ್ಕೆಗಳ ಮೂಲಕ ಬಳಕೆದಾರರ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಲು ಮೆಟಾ ಮಾಲೀಕತ್ವದ ವಾಟ್ಸಾಪ್‌ ಮುಂದಾಗಿದೆ.

ಇದರೊಂದಿಗೆ ಸಂಭಾವ್ಯ ಭದ್ರತಾ ಉಲ್ಲಂಘನೆಗಳಿಂದ ಫೋಟೋಗಳು, ವೀಡಿಯೊಗಳು ಮತ್ತು ಟೆಕ್ಸ್ಟ್ ಮೆಸೆಜ್‌ಗಳನ್ನು ರಕ್ಷಿಸಲು Rust ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನೂ ಸಹ ಸಂಸ್ಥೆಯು ಹೊರತಂದಿದೆ. ಹೀಗಾಗಿ ಬಳಕೆದಾರರ ವಿಶ್ವಾಸದಿಂದ ಫೋಟೋ, ವಿಡಿಯೋ ಶೇರ್ ಮಾಡಬಹುದು ಹಾಗೂ ಚಾಟ್ ಮಾಡಬಹುದು. ಇನ್ನು ಸಂಸ್ಥೆಯ ಮಾಹಿತಿ ಪ್ರಕಾರ, ರಸ್ಟ್ ಎನ್ನುವುದು ಮೆಮೊರಿ-ಸುರಕ್ಷಿತ ಭಾಷೆಯಾಗಿದೆ. ಇದನ್ನು ವಾಟ್ಸಾಪ್‌ನ ಕ್ರಾಸ್-ಪ್ಲಾಟ್‌ಫಾರ್ಮ್ C++ ಲೈಬ್ರರಿಯಾದ wamedia ಜೊತೆಗೆ ಸಮಾನಾಂತರವಾಗಿ ಅಭಿವೃದ್ಧಿಪಡಿಸಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries