ಮಂಜೇಶ್ವರ: ಮಲಯಾಳ0 ಭಾಷಾ ಬಿಲ್ 2025ರ 6(1) ನ್ನು ಜಾರಿಗೆ ತರಬಾರದೆಂಬ ವಿನಂತಿಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಿಗೆ ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ನೀಡಲಾಯಿತು.
ಕಲಾ ಕುಂಚದ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ, ಕಾರ್ಯದರ್ಶಿ ಜಯಲಕ್ಷ್ಮಿ. ಆರ್. ಹೊಳ್ಳ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯರಾದ ವಸಂತ ಕುಮಾರ್ ಮಯ್ಯ, ಸಾಮಂತಕುಮಾರ್ ಶೆಟ್ಟಿ, ಸಾಕ್ಷಿ ಶೆಟ್ಟಿ ಮೀನಾರ್, ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ವಿಜಯಕುಮಾರ್ ರೈ ಮತ್ತು ಕನ್ನಡ ಪರ ಹೋರಾಟಗಾರ ನವೀನ್ ಕುಮಾರ್, ಕಿಶೋರ್ ಕುಮಾರ್, ಭರತ ರೈ ಮತ್ತು ಚಂದ್ರ ಕಾಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

.jpg)
