HEALTH TIPS

ತೊಟ್ಟೆತ್ತೋಡಿಯಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ

ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮವನ್ನು ವಸಂತ ಭಟ್ ತೊಟ್ಟೆತ್ತೋಡಿ ಧ್ವಜಾರೋಹಣಗೈದು ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಅಧ್ಯಕ್ಷತೆ ವಹಿಸಿದ್ದರು.  ಗ್ರಾ.ಪಂ.ಸದಸ್ಯೆ ಶಾಲಿನಿ ಬಿ ಶೆಟ್ಟಿ ಹಾಗೂ ಶರೀಫ್ ಚಿನಾಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ ಅವರನ್ನು ಗಣ್ಯರ ಸಮಕ್ಷಮದಲ್ಲಿ ಗೌರವಿಸಲಾಯಿತು. ಮಂಜೇಶ್ವರ ಸೀನಿಯರ್ ಸುಪರಿಂಟೆಂಡೆಂಟ್ ಜಿತೇಂದ್ರ ಎಸ್.ಎಸ್ ಶಾಲಾ ಚಟುವಟಿಕೆಗಳ ಬಗ್ಗೆ ತಿಳಿಸಿದರು. ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಗಿರಿಧರ್ ರಾವ್.ಎಮ್.ಎಸ್ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ಶಾಲಾ ಹಳೆ ವಿದ್ಯಾರ್ಥಿ ಶಿವಶಂಕರ ಭಟ್ ಎ. ಶಾಲಾ  ಜೀವನದ ಅನುಭವಗಳನ್ನು ತಿಳಿಸಿದರು. 

ಶಂಕರ ಚಿಗುರುಪಾದೆ, ಹರೀಶ ತೊಟ್ಟೆತ್ತೋಡಿ, ಸರಸ್ವತಿ ಕೆ., ಕುಸುಮ ಮೋಹನ್, ಸುಜಾತೆ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಬಳಗದ ನಾರಾಯಣ ನಾಯ್ಕ್ ಕುಳೂರು ಇವರನ್ನು ಗೌರವಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಗಣೇಶ ಜಪ್ಪ, ಎಂ.ಪಿ.ಟಿ.ಎ. ಹೇಮಾವತಿ, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಡಿ ಸದಾಶಿವ ರಾವ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಟಿ.ಆರ್. ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ರಾಜೇಶ್ವರಿ ಎಸ್. ರಾವ್ ಸ್ವಾಗತಿಸಿ, ಅಧ್ಯಾಪಿಕೆ ದೀಕ್ಷಾ ಕೆ. ವಂದಿಸಿದರು. ಜಯಲಕ್ಷ್ಮೀ ಟೀಚರ್, ಸುಶ್ಮಿತ ಟೀಚರ್, ಅಶ್ವಿನಿ ಕಲ್ಲಗದ್ದೆ, ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬಾಲಸುಬ್ರಮಣ್ಯ ಭಟ್ ಕಡೆಂಗೋಡಿ ಇವರ ಇಂದ್ರಜಾಲ ಪ್ರದರ್ಶನ ಗಮನ ಸೆಳೆಯಿತು. ನವಯುವಕ ಕಲಾವೃಂದ ಕುಳೂರು ಇವರ ಕಡೀರ ಮಗೆ  ನಾಟಕ ಪ್ರದರ್ಶನಗೊಂಡಿತು. ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries