HEALTH TIPS

ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ಆಟದಂಗಳ ಶಿಬಿರ

ಉಪ್ಪಳ: ಸಮಗ್ರ ಶಿಕ್ಷಾ ಕೇರಳ 2025- 26 ಸ್ಟಾರ್ ಎಸ್. ಐ. ಜಿ -1 ಆಟದಂಗಳ "ಕಿಡ್ಸ್ ಅಥ್ಲೆಟಿಕ್ಸ್" ಯೋಜನೆ ಪ್ರಕಾರ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸಲು ಶಾರೀರಿಕವಾಗಿ ಮಾನಸಿಕ ಸುಧೃಢಗೊಳಿಸಲು ರಾಜ್ಯದ ಎಲ್ಲಾ ಕಿರಿಯ ಪ್ರಾಥಮಿಕ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸ್ಪೋಟ್ರ್ಸ್ ಕೇರಳ ಫೌಂಡೇಶನ್ ಸಹಕಾರದೊಂದಿಗೆ ಕ್ರೀಡಾ ಉಪಕರಣಗಳನ್ನು ಒಳಗೊಂಡ ಸ್ಪೋಟ್ರ್ಸ್ ಕಿಟ್ಟನ್ನು ಒದಗಿಸಲಾಗಿದೆ. ಈ ಉಪಕರಣ  ಫಲಪ್ರದವಾಗಿ ಬಳಸಲು ಪ್ರತಿಶಾಲೆಯಿಂದ ಅಧ್ಯಾಪಕರಿಗೆ ವಿಶೇಷ ವಿನೂತನ ಶಿಬಿರವನ್ನು ಹಮ್ಮಿಕೊಂಡಿದ್ದು, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ಪ್ಲೇಟ್ ಟಾಪಿಂಗ್ ಆಟ ದೊಂದಿಗೆ ಉದ್ಘಾಟಿಸಿದರು. 

ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಡಿ.ಪಿ.ಓ ಕಾಸರಗೋಡಿನ ಸಮಗ್ರ ಶಿಕ್ಷಾ ಜಿಲ್ಲಾ ಸಂಯೋಜಕ ಆಗಸ್ಟಿನ್ ಬರ್ನಾಡು ಅವರು ಸುಮಾರು 18 ಆಟಗಳೊಂದಿಗೆ ನಡೆಯಲಿರುವ ಶಿಬಿರದ ಉದ್ದೇಶವನ್ನು ತಿಳಿಸಿದರು. 60 ಅಧ್ಯಾಪಕರು ಭಾಗವಹಿಸಿದ ಶಿಬಿರದ ನೇತೃತ್ವ ವಹಿಸಿದ ಮುಳಿಂಜ ಜಿ.ಎಲ್.ಪಿ ಶಾಲೆಯ ಮುಖ್ಯೋಪಾಧ್ಯಾಯನಿ ಚಿತ್ರಾವತಿ ಚಿಗುರುಪಾದೆ ಆಟದಂಗಳ ಶಿಬಿರದ ಅಗತ್ಯ ಮತ್ತು ಹಿರಿಮೆ ತಿಳಿಸಿದರು. ಬಿ.ಆರ್.ಸಿ.ಯ ತರಬೇತುದಾರೆ ಸುಮಯ್ಯ ಟೀಚರ್ ಸ್ವಾಗತಿಸಿ, ಸಿ.ಆರ್.ಸಿ ಸಂಯೋಜಕಿ ಶಾಮಲಾ ವಂದಿಸಿದರು. ಮಂಜೇಶ್ವರದ ಸ್ಪೆಷಲಿಸ್ಟ ಅಧ್ಯಾಪಕರಾದ ಗೋಪಿ ಮತ್ತು ಮೊಯ್ದೀನ್ ಕುಂಞÂ್ಞ ತರಬೇತುದಾರರಾಗಿ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries