HEALTH TIPS

'ಪಕ್ಷಿ ಹಾಡು' ಗೀತೆಯ 100ನೇ ವಾರ್ಷಿಕೋತ್ಸವಕ್ಕೆ ಕಾಸರಗೋಡಿನಲ್ಲಿ ಚಾಲನೆ

ಕಾಸರಗೋಡು: ಒಂದು ಕಾಲದಲ್ಲಿ ದೇಶಾದ್ಯಂತ ಹಾಡಲ್ಪಡುತ್ತಿದ್ದ ಮೊಗ್ರಾಲ್‍ನ ನಡುತೋಪ್ಪಿಲ್ ಅಬ್ದುಲ್ಲಾ ಅವರು ರಚಿಸಿದ 'ಪಕ್ಷಿ ಹಾಡು' ಗೀತೆಯ 100ನೇ ವಾರ್ಷಿಕೋತ್ಸವ ಕಾಸರಗೋಡು ನಗರಸಭಾ ವನಿತಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಮಹಾಕವಿ ಮೋಯಿನ್‍ಕುಟ್ಟಿ ವೈದ್ಯರ್ ಮಾಪಿಲ ಕಲಾ ಅಕಾಡೆಮಿಯ ಆಶ್ರಯದಲ್ಲಿ  ಇಶಾಲ ಗ್ರಾಮ ಟ್ರಸ್ಟ್-ಸ್ಕೂಲ್ ಆಫ್ ಮಾಪಿಲ ಆಟ್ರ್ಸ್ ಮೊಗ್ರಾಲ್, ಪ್ರಗತಿಪರ ಕಲೆ ಮತ್ತು ಸಾಹಿತ್ಯ ಬಳಗ ಕಾಸರಗೋಡು ಸಹಕಾರದೊಂದಿಗೆ ಮೊಗ್ರಾಲಿನಲ್ಲಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ಅಂಗವಾಗಿ ನಡೆದ ಸಾಹಿತ್ಯ ವಿಚಾರ ಸಂಕಿರಣವನ್ನು   ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿದರು. ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಶಂಶಾದ್ ಹುಸೇನ್ ಕೆ.ಟಿ.  ಅಧ್ಯಕ್ಷತೆ ವಹಿಸಿದ್ದರು. ಫೈಸಲ್ ಕಮ್ಮನಂ, ಡಾ.ಪಿ.ಪಿ.ಅಬ್ದುಲ್ ರಝಾಕ್  ಡಾ. ಅಭಿಲಾಷ್ ಮಲಯಿಲ್, ಡಾ. ಫಾತಿಮತ್ ರಂಶೀಲಾ ಸಿ.ಎಚ್  ಅವರು ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು. 

ವಿಚಾರ ಸಂಕಿರಣದಲ್ಲಿ ಮಾಪಿಳ ಕಲೆಯ ಕಥಾವಸ್ತು ಮತ್ತು ಪಕ್ಷಿ ಹಾಡಿನ ಬಗ್ಗೆ ಚರ್ಚಿಸಲಾಯಿತು. ಪತ್ರಕರ್ತ ಟಿ.ಎ. ಶಾಫಿ, ಕವಿ ಪಿ.ಎಸ್. ಹಮೀದ್ ಮತ್ತು ಕಾರ್ಯಕ್ರಮ ಸಮಿತಿ ಅಧ್ಯಕ್ಷ ಜೆ.ಎ. ಮೊಗ್ರಾಲ್ ಉಪಸ್ಥಿತರಿದ್ದರು. ಅಶ್ರಫ್ ಪಯ್ಯನ್ನೂರು ಮತ್ತು ಟಿ.ಕೆ. ಅನ್ವರ್ ಹಾಡಿನೊಂದಿಗೆ ರಂಜಿಸಿದರು.  ರವೀಂದ್ರನ್ ಕೊಡಕ್ಕಾಡ್ ಸ್ವಾಗತಿಸಿದರು. ಅಕಾಡೆಮಿ ಕಾರ್ಯದರ್ಶಿ ಬಶೀರ್ ಚುಂಗತ್ತರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ಕೆ.ಎಚ್.ಮುಹಮ್ಮದ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries