ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಶತಾಬ್ದಿ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ 'ಗ್ಲೋಬಲ್ ಎಕ್ಸ್ ಪೋ'ಗೆ ಕಾಸರಗೋಡಿನ ಕುಣಿಯದಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಗ್ಲೋಬಲ್ ಎಕ್ಸ್‍ಪೆÇೀ ಪ್ರದರ್ಶನ ಉದ್ಘಾಟಿಸಿದರು. ಎಕ್ಸ್‍ಪೋ ಟಿಕೆಟನ್ನು ಡ್ರೋನ್ ಮೂಲಕ ಟಿಕೆಟ್ ತಲುಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಸುಮಾರು ಐದು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಎಕ್ಸ್‍ಪೆÇೀ ನಗರಿಯಲ್ಲಿ ಸಮಸ್ತದ ನೂರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಸಾರುವ ಹತ್ತು ಬೃಹತ್ ಪೆವಿಲಿಯನ್‍ಗಳನ್ನು ನಿರ್ಮಿಸಲಾಗಿದೆ. ಫೆ. 1ರಂದು ಮಹಿಳೆಯರಿಗೆ ಹಾಗೂ ಫೆಬ್ರವರಿ 2 ರಿಂದ 8 ರವರೆಗೆ ಪುರುಷರಿಗೆ ಪ್ರವೇಶಾವಕಾಶ ನಿಗದಿಪಡಿಸಲಾಗಿದೆ. ಕೇರಳದ ಸಾಂಪ್ರದಾಯಿಕ ಶೈಲಿಯ ಓತುಪಳ್ಳಿಗಳು, ದರ್ಸ್ ಮತ್ತು ಮದ್ರಸಾಗಳ ಶಿಕ್ಷಣ ವ್ಯವಸ್ಥೆಯ ಪರಿಚಯ, ಆಧ್ಯಾತ್ಮಿಕ ಮತ್ತು ಆಚರಣೆಗಳ ಒಳನೋಟಗಳನ್ನು ಎಕ್ಸ್ ಪೋ'ದಲ್ಲಿ ಒಳಗೊಂಡಿದೆ. ಇಸ್ಲಾಮಿಕ್ ಕರ್ಮಶಾಸ್ತ್ರ ಗ್ರಂಥ 'ಫತ್ಹುಲ್ ಮುಈನ್' ವಿವರಿಸುವ ಎ.ಐ (ಂI) ಉಸ್ತಾದ್, ಕ್ಯಾಲಿಗ್ರಫಿ ಕಲೆ ಮತ್ತು ಮಕ್ಕಳಿಗಾಗಿ ಜ್ಞಾನಯುತ ಪ್ರದರ್ಶನಗಳು ಇಲ್ಲಿನ ವಿಶೇಷತೆಗಳಾಗಿವೆ.
ಪ್ರದರ್ಶನದ ಜೊತೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಅಂತಾರಾಷ್ಟ್ರೀಯ ಮಟ್ಟದ ಸಂವಾದ, ಬುರ್ದಾ ಮಜ್ಲಿಸ್, ದಫ್ ಮುಟ್ಟು, ಗಜಲ್, ದೀಪ್ ರಾತೀಬ್ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. ಫೆಬ್ರವರಿ 4 ರಿಂದ 8 ರವರೆಗೆ ಸಮಸ್ತ ಶತಾಬ್ದಿ ಅಂತರಾಷ್ಟ್ರೀಯ ಮಹಾಸಮ್ಮೇಳನ ನಡೆಯಲಿದೆ.


