HEALTH TIPS

12 ರಿಂದ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಬದಿಯಡ್ಕ: ಎಡನೀರು ಶ್ರೀ ವಿಷ್ಣುಮಂಗಲ  ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 12ರಿಂದ 16ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದೆ. 12ರಂದು ಬೆಳಿಗ್ಗೆ 9.30ಕ್ಕೆ ಧ್ವಾಜಾರೋಹಣ,  ಸಂಜೆ 7.30ರಿಂದ ದೀಪೆÇೀತ್ಸವ ನಡೆಯಲಿದೆ. 13ರಂದು ನಡುದೀಪೆÇೀತ್ಸವ, 14ರಂದು ಶ್ರೀಭೂತಬಲಿ, ಬೆಡಿ ಉತ್ಸವ, ಶ್ರೀಮಠದ ಮುಂಭಾಗ ರಾತ್ರಿ 12 ರಿಂದ ಪುಷ್ಪ ರಥೋತ್ಸವ, 16ರಂದು ರಾತ್ರಿ 9.30 ರಿಂದ ಶ್ರೀಮಠದ ಮುಂಭಾಗ ನೃತ್ಯೋತ್ಸವ, ವಿಶೇಷ ತೆಪೆÇ್ಪೀತ್ಸವ ನಡೆಯಲಿದೆ. ಬಳಿಕ ಅವಭೃತ ಸ್ನಾನದೊಂದಿಗೆ ಪ್ರಸಾದವಿತರಣೆಯಾಗಿ ಧ್ವಜಾವರೋಹಣ  ನಡೆಯುವುದು.

18ರಂದು ಬೆಳಿಗ್ಗೆ 10ಕ್ಕೆ ಮಠದ ಮುಂಭಾಗ ವಿಷ್ಣುಮೂರ್ತಿ, ಗುಳಿಗ ದೈವದ ಕೋಲ ಊರವರ ವತಿಯಿಂದ ಜರಗಲಿದೆ. 22ರಂದು ಬೆಳಿಗ್ಗೆ 7ರಿಂದ ಶ್ರೀಮಠದ ಕಾವಲು ದೈವ ಕುಂಟಪಾಲ ಚಾಮುಂಡಿ ಕೋಲ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ   ಫೆ. 12ರಂದು ಸಂಜೆ 7ರಿಂದ ಕಲೈ ಮಾಮಣಿ ಪದ್ಮಶ್ರೀ ಶ್ರೀಕಲ್ಯಾಣ ಸುಂದರಂ ಶ್ರೀ ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರ ಮುಂಬಯಿ ಇದರ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಭರತನಾಟ್ಯ ನಡೆಯಲಿದೆ.

13ರಂದು ಸಂಜೆ 7ರಿಂದ ಕಲಾ ಕಾಂಕೋಳ್ ಪ್ರಸ್ತುತ ಪಡಿಸುವ 'ಉರುಮಾಳ್ ಕೆಟ್ಟಿಯ ಚೈತ್ರಮಾಸಂ'ಎಂಬ ಮಲಯಾಳ ನಾಟಕ ಪ್ರದರ್ಶನಗೊಳ್ಳುವುದು. 14ರಂದು ಸಂಜೆ7ಕ್ಕೆ ನಾಟ್ಯರಂಗ ಎಡನೀರು ಇದರ ವಾರ್ಷಿಕೋತ್ಸವ ಅಂಗವಾಗಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು ನಿರ್ದೇಶನದಲ್ಲಿ 'ನೃತ್ಯಹರ್ಷ'ಕಾರ್ಯಕ್ರಮ ನಡೆಯುವುದು. 15ರಂದು ಸಂಜೆ 7ರಿಂದ ನಾಟ್ಯ ನಿಲಯ ಬಾಲಕೃಷ್ಣ ಮಂಜೇಶ್ವರ ಇವರ ನಿರ್ದೇಶನದಲ್ಲಿ 'ನೃತ್ಯಾಮೃತಮ್' ಕಾರ್ಯಕ್ರಮ ನಡೆಯಲಿದೆ.17ರಂದು ರಾತ್ರಿ 7ರಿಂದ ವಿದ್ವಾನ್ ಅನಂತ ಕುಲಕರ್ಣಿ ಅವರಿಂದ ಭಕ್ತಿಗಾನಸೂಧಾ ಕಾರ್ಯಕ್ರಮ ಜರಗಲಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries