ಕಾಸರಗೋಡು: ಭಾರತೀಯ ಸಮಾನತಾ ಪಕ್ಷ(ಈಕ್ವಾಲಿಟಿ ಪಾರ್ಟಿ ಆಫ್ ಇಂಡಿಯಾ)ದ ಕಾಸರಗೋಡು ಜಿಲ್ಲಾ ಸಮಾವೇಶ ಫೆ. 5ರಂದು ಮಧ್ಯಾಹ್ನ 2ಗಂಟೆಗೆ ಕಾಸರಗೋಡು ನಗರಸಭಾ ವನಿತಾ ಸಭಾಂಗಣದಲ್ಲಿ ಜರುಗಲಿರುವುದಾಗಿ ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ನೆಡುಮಂಗಾವು ಗೋಪ ಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವದೆಹಲಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಸ್ವತಂತ್ರ ರಾಜಕೀಯ ಚಳುವಳಿಯಾಗಿ ಭಾರತೀಯ ಸಮಾನತಾ ಪಕ್ಷ ಕಾರ್ಯಾಚರಿಸುತ್ತಿದ್ದು, ಕೇರಳದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲಿದೆ. ನಿಗದಿತ ಯೋಜನೆಗಳಿಗಾಗಿ ಕೇಂದ್ರದಿಂದ ಬಿಡುಗಡೆಯಾಗುವ ಹಣವನ್ನು ಕೇರಳದಲ್ಲಿ ಬೇರೆ ವಿಷಯಗಳಿಗೆ ಖರ್ಚುಮಾಡುವ ಮೂಲಕ ಫಲಾನುಭವಿಗಳಿಗೆ ವಂಚನೆಯೆಸಗಲಾಗುತ್ತಿದೆ. ಕೇರಳದಲ್ಲಿ ಹೊಸ ರಾಜಕೀಯ ಬದಲಾವಣೆಗಾಗಿ ಈಕ್ವಾಲಿಟಿ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಚಳುವಳಿ ಅಸ್ತಿತ್ವಕ್ಕೆ ಬರುವುದು ಇಂದಿನ ಕಾಲಘಟ್ಟದ ಅನಿವರ್ಯವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ರಜಿನಿ ಪ್ರಸಾದ್ ಮತ್ತು ಕೆ.ಪಿ. ಉಮ್ಮರ್ ಭಾಗವಹಿಸಿದ್ದರು.

