HEALTH TIPS

ಆದಾಯ ತೆರಿಗೆ ಇಲಾಖೆಯಿಂದ ₹1.5 ಕೋಟಿ ದಂಡ: ಟಿವಿಕೆ ಮುಖ್ಯಸ್ಥ ವಿಜಯ್ ಅರ್ಜಿ ವಜಾ

ಚೆನ್ನೈ: ಆದಾಯ ತೆರಿಗೆ ಇಲಾಖೆ ₹1.5 ಕೋಟಿ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ. 

2015-16ರ ಆರ್ಥಿಕ ಸಾಲಿನಲ್ಲಿ ಆದಾಯ ಘೋಷಿಸದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ₹1.50 ಕೋಟಿ ದಂಡ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಆದೇಶ ಹೊರಡಿಸಿದ್ದು, ಕಾಲಮಿತಿಯಲ್ಲಿ ತೆರಿಗೆ ಇಲಾಖೆಯು ಕ್ರಮ ಕೈಗೊಂಡಿದ್ದು, ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಜನವರಿ 23ರಂದು ಆದೇಶವನ್ನು ಕಾಯ್ದಿರಿಸಲಾಗಿತ್ತು.

ಏನಿದು ಪ್ರಕರಣ?

2016-17ರ ಆರ್ಥಿಕ ಸಾಲಿನಲ್ಲಿ ವಿಜಯ್ ₹35.42 ಕೋಟಿ ಆದಾಯ ಘೋಷಿಸಿದ್ದರು. ಆದರೆ 2015ರಲ್ಲಿ ವಿಜಯ್ ನಿವಾಸದ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡ ಆಧಾರದಲ್ಲಿ ತಮಿಳಿನ 'ಪುಲಿ' ಚಿತ್ರದಿಂದ ಗಳಿಸಿದ ₹15 ಕೋಟಿ ಆದಾಯವನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿತ್ತು.

ದಾಖಲೆಗಳ ಪರಿಶೀಲನೆಗಳ ಆಧಾರದಲ್ಲಿ 2022ರ ಜೂನ್ 30ರಂದು ವಿಜಯ್ ಮೇಲೆ ₹1.50 ಕೋಟಿ ದಂಡ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ವಿಜಯ್ ಮೇಲ್ಮನವಿ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries