HEALTH TIPS

ಟ್ರಂಪ್ ಸುಂಕ ಶೇ.15ಕ್ಕೆ ಹೆಚ್ಚಳ: ಅಂತಾರಾಷ್ಟ್ರೀಯ ವ್ಯಾಪಾರ ತಳಮಳ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಪ್ರತಿಸುಂಕವನ್ನು ದೇಶದ ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ಶೇ.10ರಷ್ಟು ವಿಶ್ವವ್ಯಾಪಿ ವಿಧಿಸಿದ್ದ ಸುಂಕವನ್ನು ಶೇ.15ಕ್ಕೆ ಏರಿಸಿ ಅಮೆರಿಕದ ಅಧ್ಯಕ್ಷರು ಆದೇಶಿಸಿರುವುದು ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷರ ನಿರ್ಧಾರವನ್ನು ರದ್ದುಗೊಳಿಸುವ ತೀರ್ಪು ನೀಡಿದ ಆರು ನ್ಯಾಯಮೂರ್ತಿಗಳನ್ನು ತಮ್ಮ ಟ್ರುಥ್ ಸೋಶಿಯಲ್ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿರುವ ಟ್ರಂಪ್, ವ್ಯಾಪಾರ ಕಾಯ್ದೆಯ ಸೆಕ್ಷನ್ 122ರಲ್ಲಿ ಅವಕಾಶ ಇರುವ ಗರಿಷ್ಠ ಅಂದರೆ ಶೇ.15ರಷ್ಟು ಸುಂಕವನ್ನು ವಿಧಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಮೆರಿಕದ ದೊಡ್ಡ ಪ್ರಮಾಣದ ಬ್ಯಾಲೆನ್ಸ್ ಆಫ್ ಪೇಮೆಂಟ್ ಕೊರತೆಯನ್ನು ನೀಗಿಸುವ ಸಲುವಾಗಿ ಇದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.

"ಮುಂದಿನ ಕೆಲವೇ ತಿಂಗಳಲ್ಲಿ ಟ್ರಂಪ್ ಆಡಳಿತ ಕಾನೂನುಬದ್ಧವಾಗಿ ಅನುಮತಿಸಲಾದ ಹೊಸ ಸುಂಕವನ್ನು ನಿರ್ಧರಿಸಿ ಜಾರಿಗೊಳಿಸಲಿದೆ. ಅಮೆರಿಕವನ್ನು ಮತ್ತೆ ಸರ್ವಶ್ರೇಷ್ಠ ದೇಶವಾಗಿಸುವ ನಮ್ಮ ಯಶಸ್ವಿ ವಿಶೇಷ ಪ್ರಕ್ರಿಯೆಯನ್ನು ಇದು ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಅರ್ಥಹೀನ, ಕಳಪೆ ಮತ್ತು ಅಮೆರಿಕ ವಿರೋಧಿ ಎಂದು ಅವರು ಖಂಡಿಸಿದ್ದಾರೆ. ವಿವರವಾದ ಹಾಗೂ ಸಮಗ್ರ ಪರಿಶೀಲನೆಯ ಬಳಿಕವೇ ಸುಂಕ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries