HEALTH TIPS

ಶಿರಿಯ ಶಿವಶಕ್ತಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ 25ನೇ ವಾರ್ಷಿಕೋತ್ಸವ-ಹಗ್ಗಜಗ್ಗಾಟ

ಕುಂಬಳೆ: ಶಿರಿಯ ಶಿವಶಕ್ತಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ ಬೆಳ್ಳಿಹಗ್ಗ ಇತ್ತೀಚೆಗೆ ಶಿರಿಯ ಸರ್ಕಾರಿ ಫ್ರೌಢಶಾಲಾ ಪರಿಸರದಲ್ಲಿ ನಡೆಯಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಉದ್ಘಾಟಿಸಿ ಶುಭಹಾರೈಸಿದರು. ಮಂಗಲ್ಪಾಡಿ ಗ್ರಾ.ಪಂ.ಅಧ್ಯಕ್ಷ ಗೋಲ್ಡನ್ ರಹ್ಮಾನ್, ಸದಸ್ಯ ಸಯೀದ್, ಮುಂಡಪ್ಪಳ್ಳ ರಾಜರಾಜೇಶ್ವರಿ ದೇವಾಲಯದ ಆಡಳಿತ ಟ್ರಸ್ಟಿ ಕೆ.ಕೆ.ಶೆಟ್ಟಿ, ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದ, ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಸಮಿತಿ ಅಧ್ಯಕ್ಷೆ ರೇವತಿ ಕಮಲಾಕ್ಷ, ಕೇರಳ ರಾಜ್ಯ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷ ಇಚ್ಲಂಪಾಡಿ ಲಕ್ಷ್ಮಣ ಪೆರಿಯಡ್ಕ, ಸೀರೆ ಶ್ರೀಶಂಕರನಾರಾಯಣ ದೇವಾಲಯದ ಆಡಳಿತ ಟ್ರಸ್ಟಿ ಪ್ರಶಾಂತ್ ಕುಮಾರ್ ವಿ., ಅಡ್ಕ ಶ್ರೀಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಪಿ., ಉಪಸ್ಥಿತರಿದ್ದು ಶುಭಹಾರೈಸಿದರು. ಕ್ಲಬ್ ಅಧ್ಯಕ್ಷ ಕಮಲಾಕ್ಷ ಎಸ್. ಉಪಸ್ಥಿತರಿದ್ದರು. ಕ್ಲಬ್ ಗೌರವಾಧ್ಯಕ್ಷ ವಕೀಲ ಬಾಲಕೃಷ್ಣ ಶೆಟ್ಟಿ ವಿ.ಸ್ವಾಗತಿಸಿ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಸೀರೆ ವಂದಿಸಿದರು. ಬಳಿಕ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಪುರುಷರ ವಿಭಾಗದಲ್ಲಿ ಡಿ.ಕೆ.ಸುದೆಂಬಳ(ಪ್ರಥಮ), ಪಿ.ಎಫ್.ಸಿ.ಪರಂಕಿಲ(ದ್ವಿತೀಯ) ಹಾಗೂ ಮಹಿಳೆಯರ ವಿಭಾಗದಲ್ಲಿ ನವೋದಯ ಮುಟ್ಟ(ಪ್ರಥಮ) ಹಾಗೂ ಮಹಾಲಿಂಗೇಶ್ವರ ಕುಂಜತ್ತೂರು(ದ್ವಿತೀಯ) ಸ್ಥಾನಗಳನ್ನು ಪಡೆದವು. ವಿಜಯಕುಮಾರ್ ರೈ ಹಾಗೂ ಧರ್ಮಪ್ರಸಾದ್ ರೈ ಅಡ್ಕ ಬಹುಮಾನ ವಿತರಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries