ಬದಿಯಡ್ಕ: ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಭಾರೀ ಲಾಭ ನೀಡುವುದಾಗಿ ನಂಬಿಸಿ 27,14,000 ರೂ. ಪಡೆದು ವಂಚನೆಗೈದ ದೂರಿ ನಂತೆ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಕುಂಬಳೆ ನಾಯ್ಕಾಪು ಅನಂತಪುರ ದೇವಸ್ಥಾನ ರಸ್ತೆ ಬಳಿಯ ನಿವಾಸಿಯೋರ್ವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಸೈಬರ್ ಪೊಲೀಸರು ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರೇಡ್ ಗ್ರಿಪ್ ಎಂಬ ಟ್ರೇಡಿಂಗ್ ಕಂಪೆನಿ ಹೆಸರಲ್ಲಿ ಎಐಯ ವಿವಿಧ ಕಂಪೆನಿಗಳಲ್ಲಿ ಠೇವಣಿ ಹೂಡಿದಲ್ಲಿ ಭಾರೀ ಲಾಭ ನೀಡಲಾಗುವುದೆಂದು ನಂಬಿಸಿ ಆರೋಪಿಗಳು 2025 ಜೂನ್ ತಿಂಗಳಿಂದ 2026 ಜನವರಿ 20ರ ಅವಧಿಯಲ್ಲಿ ತನ್ನ ಬ್ಯಾಂಕ್ ಖಾತೆಯಿಂದ ಈ ಹಣ ಪಡೆದು ಬಳಿಕ ಲಾಭಾಂಶವನ್ನಾಗಲೀ, ಪಾವತಿಸಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ನಾಯ್ಕಾಪು ನಿವಾಸಿ ತಿಳಿಸಿದ್ದಾರೆ. ಇದ ರಂತೆ ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.

