ಕಾಸರಗೋಡು: ಚುನಾವಣೆಯ ಪೂರ್ವಭಾವಿ ಸಿದ್ಧತೆಯಂಗವಾಗಿ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾಸರಗೋಡು ಲೋಕಸಭಾ ಮಂಡಲದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ, ಪಂಚಾಯತ್ ಏರಿಯಾ ಇನ್‌ಚಾರ್ಜ್‌ಗಳ ನಾಯಕತ್ವ ಸಭೆಯನ್ನು ಬಿಜೆಪಿ ಕರ್ನಾಟಕ ಮಾಜಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಕೇರಳದಲ್ಲಿ ಬಿಜೆಪಿಗೆ ಸ್ಥಳವಿಲ್ಲವೆಂದು ಪ್ರಚಾರ ಪಡಿಸಿದವರಿಗಿರುವ ತಿರುಗೇಟಾಗಿದೆ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶವೆಂದು ಅವರು ನುಡಿದರು. ಮುಂದಿನ ವಿಧಾನಸಭಾ ಮಂಡಲ ಚುನಾವಣೆ ಗಳಲ್ಲೂ ಬಿಜೆಪಿಯ ಶಕ್ತಿ ಪ್ರಕಟವಾಗಲಿದೆ ಎಂದು ಅವರು ನುಡಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ವಲಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ. ಕಾಶಿನಾಥ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಎ. ವೇಲಾಯುಧನ್, ಪಿ.ಆರ್. ಸುನಿಲ್, ಮನುಲಾಲ್ ಮೇಲತ್, ಮನೋಜ್, ವಿಜಯ ಕುಮಾರ್ ರೈ ಮಾತನಾಡಿದರು.


