HEALTH TIPS

ಫೆ.28 ರಿಂದ ಕುಂಟಿಕಾನ ಮಠದಲ್ಲಿ ವರ್ಷಾವಧಿ ಜಾತ್ರೆ

ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೆಯು ಫೆ.27 ಮತ್ತು ಫೆ.28 ರಂದು ಜರಗಲಿರುವುದು. ಫೆ.27 ರಂದು ಪೂರ್ವಾಹ್ನ 7.30ಕ್ಕೆ ಉಷಃಪೂಜೆ, 10 ರಿಂದ ದೇವಸ್ಯ ಜಯರಾಮ ಭಟ್ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, 10.30 ರಿಂದ ನವಕಾಭಿಷೇಕ ಮತ್ತು ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಭಜನೆ, ರಾತ್ರಿ 9ಕ್ಕೆ ಶ್ರೀ ದೇವರ ಬಲಿ ಉತ್ಸವ, ಸಿಡಿಮದ್ದು ಪ್ರದರ್ಶನ. ಫೆ.28 ರಂದು ಪೂರ್ವಾಹ್ನ 9.30 ರಿಂದ ಶ್ರೀಭೂತಬಲಿ ಉತ್ಸವ, ಬಟ್ಟಲು ಕಾಣಿಕೆ, ಶ್ರೀಮುಡಿ ಗಂಧಪ್ರಸಾದ ವಿತರಣೆ, ಮಂತ್ರಾಕ್ಷತೆ. ರಾತ್ರಿ 8 ರಿಂದ ಕಾರ್ತಿಕ ಪೂಜೆ, ದೈವಗಳ ತೊಡಂಙಲ್, ಅನ್ನಸಂತರ್ಪಣೆ, ಮಾ.1 ರಂದು ಭಾನುವಾರ ಬೆಳಗ್ಗೆ 6ಕ್ಕೆ ಶ್ರೀ ಪೂಮಾಣಿ ಕಿನ್ನಿಮಾಣಿ ಭೂತಕೋಲ, 10 ರಿಂದ ಕುಂಟಿಕಾನ ಧೂಮಾವತಿ ದೈವದ ಕೋಲ, ಅರಶಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries