HEALTH TIPS

ತಾಯಿ ಋಣ ತೀರಿಸಲು ನೂರು ಜನ್ಮ ಸಾಲದು-ಕೊಂಡೆವೂರು ಶ್ರೀ: ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಕಾಸರಗೋಡು: ಅಮ್ಮ ಎಂಬ ಎರಡಕ್ಷರ ನಮ್ಮ ಜೀವನಕ್ಕೆ ಹಾದಿ ತೋರುವ ಪ್ರಬಲ ಮಂತ್ರವಾಗಿದ್ದು, ತಾಯಿಯ ಋಣ ತೀರಿಸಲು ನೂರು ಜನ್ಮ ಸಾಲದು ಎಂಬುದಾಗಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಅವರು  ಕಾಸರಗೋಡು ತೆರುವತ್ತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಮಹೋತ್ಸªವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.  


ಪ್ರತಿಯೊಬ್ಬ ಮನುಷ್ಯನಿಗೆ ಸುಖ ಸೌಕರ್ಯ ಬೇಕಾಗಿವೆ. ಆದರೆ ಇಂದು ತಾಯಿ ಬೇಡವಾಗುತ್ತಿದ್ದಾಳೆ. ಇದು ದುರಾದೃಷ್ಟಕರ.  ದೇವಸ್ಥಾನಗಳಲ್ಲಿ ದೇವರ ಚೈತನ್ಯ ಹೆಚ್ಚಿಸಲು ಹಾಗೂ ಪರಿಸರ ಶುದ್ಧಿಗೊಳಿಸುವ ನಿಟ್ಟಿನಲ್ಲಿ ನಾವು ಹೋಮ ಹವನಗಳನ್ನು ನಡೆಸುತ್ತಿದ್ದೇವೆ.  ಚಂಡಿಕಾ ಹೋಮದಂತಹ ಹೋಮ, ಹವನಗಳು ಕ್ಷೇತ್ರಗಳ ಸಾನಿಧ್ಯವನ್ನು ವೃದ್ಧಿಗೊಳಿಸಲು ಸಹಕಾರಿ. ತೆರುವತ್ ಶ್ರೀ ಭಗವತೀ ಕ್ಷೇತ್ರ ವತಿಯಿಂದ ನಡೆಸುತ್ತಿರುವ ಸೇವಾ ಚಟುವಟಿಕೆ ಶ್ಲಾಘನೀಯ ಎಂದು ತಿಳಿಸಿದರು.   

ಈ ಸಂಧರ್ಭ ಕ್ಷೇತ್ರದ ವತಿಯಿಂದ ನೀಡಲಾದ ಎರಡು ಗಾಲಿಕುರ್ಚಿ ಮತ್ತು ಮಡಚುವ ಮಂಚವನ್ನು ಶ್ರೀಗಳು ಸೇವಾ ಭಾರತಿಯ ಜಿಲ್ಲಾ ಅಧ್ಯಕ್ಷ ಎಂ.ಟಿ. ದಿನೇಶ್ ಅವರಿಗೆ ಹಸ್ತಾಂತರಿಸಿದರು . ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಉತ್ಸವ ಸಮಿತಿ ಅಧ್ಯಕ್ಷ ವಕೀಲ ನಾರಾಯಣ ಕೆ. ವಡಕ್ಕೆವೀಡು ಅದ್ಯಕ್ಷತೆ ವಹಿಸಿದ್ದರು. ಕಾವುಮಠದ ಬ್ರಹ್ಮಶ್ರೀ ವಿಷ್ಣುಪ್ರಕಾಶ ತಂತ್ರಿ ಹಾಗೂ ಶ್ರೀ ಕ್ಷೇತ್ರದ ರಾಘವ ಮೂತ ಚೆಟ್ಟಿಯಾರ್ ದಿವ್ಯ ಉಪಸ್ಥಿತರಿದ್ದರು. ಸಮಿತಿ ರಕ್ಷಾಧಿಕಾರಿ ಗೋಕುಲದಾಸ್ ಮಂಗಳೂರು, ಮಂಗಳೂರು ಕುಕ್ಕಾಡಿ

ಕ್ಷೇತ್ರದ ರಕ್ಷಾಧಿಕಾರಿ ಕ್ಷಿತಿ ಮಂಗಳೂರು, ಉಪ್ಪಳ ಚೇರುಗೊಳಿ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷ ಕೆ. ಪಿ. ನಾರಾಯಣ, ಕುಂಬಳೆ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷ ಎನ್. ಪ್ರಭಾಕರನ್, ಚಂದನಡ್ಕ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷ ಮಧು ಪೈಕ, ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷ ಕೆ. ಎಂ ಹರೀಶ್ ಕುಮಾರ್, ಕ್ಷೇತ್ರದ ಮಹಿಳಾ ಸಮಿತಿ ಅದ್ಯಕ್ಷೆ  ಲಲಿತಾ ವಿಜಯನ್, ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಮಹೋತ್ಸವ ಸಮಿತಿಯ ಗೌರವಾದ್ಯಕ್ಷ ಡಾ. ಮಂಜುನಾಟ ಶೆಟ್ಟಿ , ಕೋಶಾದಿಕಾರಿ ಪವನ್ ಕುಮಾರ್ ಕೆ. ವಿ, ಕ್ಷೇತ್ರದ ಕೋಶಾದಿಕಾರಿ ಕೆ. ಸುರೇಂದ್ರನ್ ಅವರು ಉಪಸ್ಥಿತರಿದ್ದರು.

ಉತ್ಸವ ಸಮಿತಿಯ ಪ್ರದಾನ ಸಂಚಾಲಕ ಕೆ. ಎನ್. ಕಮಲಾಕ್ಷನ್ ಸ್ವಾಗತಿಸಿದರು.  ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಟಿ. ವಿ. ವಿಜಯನ್ ವಂದಿಸಿದರು.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries