ಮಾಸ್ಕೊ: ಉಕ್ರೇನ್ ಹಾರಿಸಿದ 11 ಡ್ರೋನ್‌ಗಳನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿದ ನಂತರ ರಷ್ಯಾ ರಾಜಧಾನಿ ಮಾಸ್ಕೊದ ನಾಲ್ಕೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ದೊಮೊಜೆದೊವ, ವ್ನುಕೊವೊ, ಝುಕೊವ್‌ಸ್ಕಿ ಹಾಗೂ ಶೆರೆಮೆತ್ಯೆವೊ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ನಾಗರಿಕ ವಿಮಾನ ಸಂಸ್ಥೆ ರೊಸಾವಿಟಾಟ್ಸಿಯಾ ಭಾನುವಾರ ತಿಳಿಸಿತು.
ಕೇವಲ ಒಂದು ತಾಸಿನ ಅವಧಿಯಲ್ಲಿ ಒಟ್ಟು 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನ ಸಂಚಾರ ರದ್ದುಪಡಿಸಲಾಗಿದೆ ಎಂದು ಮೇಯರ್ ಸರ್ಜಿ ಸೋಬ್ಯಾನಿನ್ ಹೇಳಿದರು.

