HEALTH TIPS

ಮಾರಕ ವಿಷವಿಕ್ಕಿ ನವಾಲ್ನಿ ಹತ್ಯೆ: ರಷ್ಯಾ ವಿರುದ್ಧ ಯೂರೋಪಿನ 5 ರಾಷ್ಟ್ರಗಳ ಆರೋಪ

ಮ್ಯೂನಿಚ್‌: 'ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು 2024ರಲ್ಲಿ ಜೈಲಿನಲ್ಲಿ, ಮಾರಕ ವಿಷವಿಕ್ಕಿ ರಷ್ಯಾವೇ ಹತ್ಯೆ ಮಾಡಿದೆ' ಎಂದು ಯೂರೋಪಿನ ಐದು ರಾಷ್ಟ್ರಗಳು ಆರೋಪಿಸಿವೆ. 

ಮ್ಯೂನಿಚ್‌ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಬ್ರಿಟನ್‌, ಫ್ರಾನ್ಸ್‌ , ಜರ್ಮನಿ, ಸ್ವೀಡನ್‌ ಮತ್ತು ನೆದರ್ಲೆಂಡ್ಸ್‌ ಈ ಆರೋಪ ಮಾಡಿವೆ.

ನವಾಲ್ನಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಬಲ ರಾಜಕೀಯ ವಿರೋಧಿ ಆಗಿದ್ದರು. ಜೈಲಿನಲ್ಲಿದ್ದ ಅವರನ್ನು ಹತ್ಯೆ ಮಾಡಲು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ 'ಪಾಯಿಸನ್‌ ಡಾರ್ಟ್‌ ಕಪ್ಪೆ'ಯ ಚರ್ಮದಲ್ಲಿರುವ 'ಎಪಿಬ್ಯಾಟಿಡಿನ್‌' ಎಂಬ ವಿಷವನ್ನು ಬಳಸಿದೆ. ಮೃತದೇಹದ ಜೈವಿಕ ಮಾದರಿ ಪರಿಶೀಲನೆ ವೇಳೆ ಇದು ದೃಢಪಟ್ಟಿದೆ' ಎಂದು ಈ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

19 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದ ನವಾಲ್ನಿ, 2024ರ ಫೆಬ್ರುವರಿಯಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದರು.

'ರಷ್ಯಾ ಎದುರಾಳಿಯನ್ನು ಕೊಲೆ ಮಾಡಿದೆ ಎನ್ನುವುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ' ಎಂದು ಅಲೆಕ್ಸಿ ನವಾಲ್ನಿ ಅವರ ಪತ್ನಿ ಯೂಲಿಯಾ ಸುದ್ದಿಗಾರಿಗೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries