HEALTH TIPS

ಮಹಾನಗರಗಳಲ್ಲಿ ಶೇ 70ರಷ್ಟು AI ಆಧಾರಿತ ಉದ್ಯೋಗಾವಕಾಶ; ಬೆಂಗಳೂರಿನಲ್ಲೇ ಗರಿಷ್ಠ

ಮುಂಬೈ: ಕೃತಕ ಬುದ್ದಿಮತ್ತೆ ಆಧಾರಿಸಿರುವ ಶೇ 70ರಷ್ಟು ಉದ್ಯೋಗಾವಕಾಶಗಳು ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿವೆ ಎಂದು ಸಿಬಿಆರ್‌ಇನ ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಈ ಅಧ್ಯಯನವನ್ನು 2025ರ ಡಿಸೆಂಬರ್‌ವರೆಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿರುವ Naukri.com ನಲ್ಲಿ 64,500 ಕ್ಕೂ ಹೆಚ್ಚು ಸಕ್ರಿಯ ಉದ್ಯೋಗ ಪಟ್ಟಿಗಳನ್ನು ಆಧರಿಸಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ ಪ್ರಕಾರ ಬೆಂಗಳೂರು, ಎಐ ತಂತ್ರಜ್ಞಾನದ ಪ್ರಾಥಮಿಕ ಕೇಂದ್ರವಾಗಿದೆ. ಒಟ್ಟು ಎಐ ಸಂಬಂಧಿತ ಉದ್ಯೋಗಗಳಲ್ಲಿ ಶೇ 25.4ರಷ್ಟು ಪಾಲನ್ನು ಬೆಂಗಳೂರು ಹೊಂದಿದೆ. ನಂತರದ ಸ್ಥಾನದಲ್ಲಿ ದೆಹಲಿ ಇದ್ದು, ಶೇ 24.8 ರಷ್ಟು ಉದ್ಯೋಗದ ಅವಕಾಶಗಳಿವೆ. ಮುಂಬೈನಲ್ಲಿ ಶೇ 19.2 ರಷ್ಟು ಉದ್ಯೋಗ ಅವಕಾಶಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೈದರಾಬಾದ್‌ನಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಶೇ. 12.5 ರಷ್ಟಿದೆ. ಪುಣೆಯಲ್ಲಿ ಶೇ 9.6, ಚೆನ್ನೈನಲ್ಲಿ ಶೇ 6.4 ಮತ್ತು ಕೋಲ್ಕತ್ತದಲ್ಲಿ ಶೇ 2.1 ರಷ್ಟು ಉದ್ಯೋಗಗಳಿವೆ.

ಅದರಲ್ಲಿಯೂ ಪ್ರಮುಖವಾಗಿ ಎಂಜಿನಿಯರಿಂಗ್, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ವಿಭಾಗದಲ್ಲಿ ಹೆಚ್ಚಿನ ಉದ್ಯೋಗದ ಅವಕಾಶಗಳಿವೆ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries