HEALTH TIPS

ಅದಾನಿ ಆಪ್ತರಿಂದಲೇ ಅದಾನಿ ಕಂಪನಿಯ ದೊಡ್ಡ ಮೊತ್ತದ ಷೇರು ಖರೀದಿ: ಜೈರಾಂ ರಮೇಶ್

ನವದೆಹಲಿ(PTI): 'ವಿವಿಧ ಹೆಜ್‌ ಫಂಡ್‌ (ಖಾಸಗಿ ಹೂಡಿಕೆ ನಿಧಿ) ಮೂಲಕ ದೊಡ್ಡ ಮೊತ್ತದ ಬೇನಾಮಿ ಹಣ ಬಳಸಿಕೊಂಡು ಅದಾನಿ ಸಮೂಹ ಕಂಪನಿಗಳ ಷೇರುಗಳನ್ನು ಅದಾನಿ ಅವರ ಇಬ್ಬರು ಆಪ್ತರೇ ಖರೀದಿಸಿದ್ದಾರೆ' ಎಂದು 'ಆರ್ಗನೈಜ್ಡ್‌ ಕ್ರೈಂ ಆಯಂಡ್‌ ಕರಪ್ಷನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್‌' (ಒಸಿಸಿಆರ್‌ಪಿ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ವರದಿ ಮಾಡಿದೆ.

ಈ ವರದಿಯನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು 'ಎಕ್ಸ್‌'ನಲ್ಲಿ ಹಂಚಿಕೊಂಡಿದ್ದಾರೆ. 'ಅದಾನಿ ಅವರ ಬಹಳ ಆಪ್ತರಾದ ಚೀನಾದ ಚಾಂಗ್‌ ಚುಂಗ್ ಲಿಂಗ್‌ ಮತ್ತು ಯುಎಇನ ನಾಸೆರ್‌ ಅಲಿ ಶಾಬಾನ್‌ ಅಲಿ ಅವರು ಬೇನಾಮಿ ಹಣದ ಮೂಲಕ ಅದಾನಿ ಸಮೂಹದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ' ಎಂದು ರಮೇಶ್‌ ಹೇಳಿದರು.

'ಈ ಇಬ್ಬರು ಉದ್ಯಮಿಗಳು 3 ಬಿಲಿಯನ್‌ ಡಾಲರ್‌ (ಸುಮಾರು ₹27,205 ಕೋಟಿ) ಮೊತ್ತದ ಷೇರುಗಳನ್ನು 2023ರವರೆಗೂ ಖರೀದಿಸಿದ್ದಾರೆ. ಈ ಬಗ್ಗೆ ಈ ಇಬ್ಬರು ಉದ್ಯಮಿಗಳೇ ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ವೊಂದರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ನಾವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಮೌಲ್ಯದ ಷೇರುಗಳನ್ನು ಈ ಇಬ್ಬರೂ ಖರೀದಿಸಿದ್ದಾರೆ' ಎಂದರು.

'ಕಂಪನಿಯೊಳಗಿನವರು ಅದೇ ಕಂಪನಿಯ ಷೇರುಗಳನ್ನು ಖರೀದಿಸುವುದು, ಕಂಪನಿಯೊಂದರ ಷೇರುಗಳನ್ನು ಸಾರ್ವಜನಿಕರು ಇಂತಿಷ್ಟು ಖರೀದಿಸಬಹುದು ಎನ್ನುವ ಕನಿಷ್ಠ ಪ್ರಮಾಣವನ್ನು ಕಡಿತ ಮಾಡಿ ನಿಯಮ ಉಲ್ಲಂಘಿಸಿರುವುದು- ಈ ನಿಯಮಬಾಹಿರ ವ್ಯವಹಾರಗಳನ್ನು ಅದಾನಿ ಕಂಪನಿ ಮಾಡಿದೆ. ಈ ಬಗ್ಗೆ ಅದಾನಿ ಸಮೂಹದ ಮೇಲಿರುವ 24 ಪ್ರಕರಣಗಳ ಪೈಕಿ 22 ಪ್ರಕರಣಗಳ ತನಿಖೆಯನ್ನು ಸೆಬಿಯು ಬಾಕಿ ಉಳಿಸಿಕೊಂಡಿದೆ' ಎಂದರು.

'ಈ ಎಲ್ಲರದ ಕುರಿತು ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಎಂದು ಸುಪ್ರೀಂ ಕೋರ್ಟ್‌ 2023ರ ಮಾರ್ಚ್‌ 2ರಂದು ಸೆಬಿಗೆ ಸೂಚಿಸಿತ್ತು. ಈಗ ಮೂರು ವರ್ಷ ಕಳೆದಿದೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ' ಎಂದು ರಮೇಶ್‌ ದೂರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries