HEALTH TIPS

ಇಸ್ರೇಲ್‌ಗೆ 9 ವರ್ಷಗಳ ಬಳಿಕ ಮೋದಿ ಎರಡನೇ ಭೇಟಿ: ನೆತನ್ಯಾಹು ಜೊತೆ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಬಳಿಕ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ್ದು, ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಭಾರತ ಮತ್ತು ಇಸ್ತ್ರೇಲ್ ದೃಢವಾದ ಹಾಗೂ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆ ಹೊಂದಿವೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಗಮನಾರ್ಹವಾಗಿ ಬಲಗೊಂಡಿದೆ. ಸದ್ಯ ವಿವಿಧ ಕ್ಷೇತ್ರಗಳ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇನೆ' ಎಂದು ಮೋದಿ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ನಾನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಸಹ ಭೇಟಿ ಮಾಡುತ್ತೇನೆ. ಬಳಿಕ ಇಸ್ರೇಲ್ ಸಂಸತ್ತಿನ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡುತ್ತೇನೆ. ಇದು ಬಲವಾದ ಸಂಸದೀಯ ಮತ್ತು ಪ್ರಜಾಪ್ರಭುತ್ವ ಸಂಬಂಧಗಳ ಸಂಕೇತವಾಗಿದೆ. ಭಾರತ-ಇಸ್ರೇಲ್ ಸ್ನೇಹವನ್ನು ಬಲಪಡಿಸುವಲ್ಲಿ ದೊಡ್ಡ ಕೊಡುಗೆ ನೀಡಿದ ಅನಿವಾಸಿ ಭಾರತೀಯರೊಂದಿಗೂ ಚರ್ಚೆ ನಡೆಸುತ್ತೇನೆ' ಎಂದು ಮೋದಿ ಹೇಳಿದ್ದಾರೆ.

ನೆತನ್ಯಾಹು ಅವರು ಬುಧವಾರ ರಾತ್ರಿ ಮೋದಿ ಅವರಿಗೆ ಔತಣ ನೀಡಲಿದ್ದಾರೆ. 2017ರ ಜುಲೈನಲ್ಲಿ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಮೋದಿ ಅವರು ಒಂಬತ್ತು ವರ್ಷಗಳ ಬಳಿಕ ಎರಡನೇ ಬಾರಿಗೆ ಇದೀಗ ಭೇಟಿ ನೀಡುತ್ತಿದ್ದಾರೆ. 2018ರ ಜನವರಿಯಲ್ಲಿ ಬೆಂಜಮಿನ್‌ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು.

ಎರಡೂ ದೇಶದ ಪ್ರಧಾನಿಗಳ ನಿಯೋಗ ಮಟ್ಟದಲ್ಲಿ ಗುರುವಾರ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ, ಉಭಯ ದೇಶಗಳ ನಡುವಿನ ರಕ್ಷಣೆ ಹಾಗೂ ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ವಿಷಯವಾಗಿರಲಿದೆ ಎಂಬುದು ತಿಳಿದುಬಂದಿದೆ.

ವಿಜ್ಞಾನ-ತಂತ್ರಜ್ಞಾನ, ನಾವೀನ್ಯ, ವ್ಯಾಪಾರ- ಹೂಡಿಕೆ, ಕೃಷಿ-ನೀರಾವರಿ ಕ್ಷೇತ್ರದಲ್ಲಿ ಭಾರತ-ಇಸ್ರೇಲ್‌ ನಡುವಿನ ಪರಸ್ಪರ ಸಹಕಾರ ಕುರಿತಂತೆ ಚರ್ಚಿಸಲಿರುವ ಉಭಯ ದೇಶಗಳ ಪ್ರಧಾನಿ, ತಮ್ಮ ಮಾತುಕತೆಯಲ್ಲಿ ಗಾಜಾ ಸೇರಿದಂತೆ ಮಧ್ಯಪ್ರಾಚ್ಯದ ಉದ್ವಿಗ್ನತೆಯ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries