HEALTH TIPS

ಭಾರತ-ಅಮೆರಿಕ ಒಪ್ಪಂದವು ಆರ್ಥಿಕ ಅನಿಶ್ಚಿತತೆ ಕೊನೆಗೊಳಿಸಿದೆ: ಹಣಕಾಸು ಸಚಿವಾಲಯ

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಘೋಷಣೆಯು ಜಾಗತಿಕವಾಗಿ ಆರ್ಥಿಕತೆಯ ಮೇಲೆ ಉಂಟಾಗಿದ್ದ ಅನಿಶ್ಚಿತತೆಯ ವಾತಾವರಣವನ್ನು ಕೊನೆಗೊಳಿಸಿದೆ. ಮಾತ್ರವಲ್ಲ, ಭಾರತೀಯ ಆರ್ಥಿಕತೆಗೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದವಾಗಿದ್ದು, ಇದರ ಅನ್ವಯ ಭಾರತದಿಂದ ಅಮೆರಿಕಕ್ಕೆ ಆಮದು ಆಗುವ ಸರಕುಗಳಿಗೆ ವಿಧಿಸುತ್ತಿದ್ದ ಸುಂಕದ ಪ್ರಮಾಣ ಶೇಕಡ 25ರಿಂದ ಶೇಕಡ 18ಕ್ಕೆ ಇಳಿಸಲಾಗಿದೆ.

'ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನಡುವೆಯೂ, ಭಾರತೀಯ ಆರ್ಥಿಕತೆ ಶಿಸ್ತನ್ನು ಪ್ರದರ್ಶಿಸುತ್ತಲೇ ಇತ್ತು. ಸದ್ಯ, ಅಮೆರಿಕಾ ಹಾಗೂ ಭಾರತದ ಒಪ್ಪಂದದಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಡಿಮೆಯಾಗಿದೆ' ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅನುರಾಧ ಠಾಕೂರ್ ಹೇಳಿದ್ದಾರೆ.

ಭಾರತ ಹಾಗೂ ಅಮೆರಿಕ ವ್ಯಾಪಾರ ಒಪ್ಪಂದದ ಬಳಿಕ, 2026-27ರ ಭಾರತದ ಆರ್ಥಿಕ ಬೆಳವಣಿಗೆ ಅಂದಾಜಿನ ದರ ಶೇಕಡ 6.8ರಿಂದ ಶೇ 7.2ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಭಾರತ-ಅಮೆರಿಕ ನಡುವಿನ ಈ ಹಿಂದಿನ ದುಬಾರಿ ಸುಂಕಗಳ ಆಧಾರದ ಮೇಲೆ ಸರ್ಕಾರ ಮುಂದಿನ ಹಣಕಾಸು ವರ್ಷಕ್ಕೆ ತನ್ನ ಬಜೆಟ್ ಅನ್ನು ಸಿದ್ಧಪಡಿಸಿದೆ ಎಂದು ಠಾಕೂರ್ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಹಣಕಾಸಿನ ಬದ್ಧತೆಗಳನ್ನು ಪಾರದರ್ಶಕವಾಗಿ ಸಾಧಿಸುವ ವಿಶ್ವಾಸ ನಮ್ಮ ಸಚಿವಾಲಯಕ್ಕೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು, 'ಇಂದು ಒಳ್ಳೆಯ ದಿನ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಇಬ್ಬರೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿಶ್ವದ ಆರ್ಥಿಕತೆಯ ಅನಿಶ್ಚಿತತೆಯ ಕರಾಳ ಅಧ್ಯಾಯ ಒಂದನ್ನು ತೆಗೆದುಹಾಕಿದ್ದಾರೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries