HEALTH TIPS

ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕೆ.ಸಿ. ಜಯಶ್ರೀ ನಿಧನ

 ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕಾರಡ್ಕ ಶಾಲೆ ಬಳಿಯ ನಿವಾಸಿ ಕೆ.ಸಿ. ಜಯಶ್ರೀ (5೦) ನಿಧನ ಹೊಂದಿದರು. ನಾಟಕ ನಟಿ ಹಾಗೂ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದ ಇವರು ನಾಟ್ಯ ತರಬೇತಿ ನೀಡುತ್ತಿದ್ದರು. ವಿವಿಧ ಶಾಲಾ ಕಾಲೇಜು ಕಲೋತ್ಸವಗಳಲ್ಲಿ ಮಕ್ಕಳಿಗೆ ನಾಟ್ಯ ತರಬೇತಿ ನೀಡುತ್ತಿದ್ದರು. ಕೆಲವು ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಇವರು ಚೇತರಿಸಿಕೊಂಡು ನಂತರ ಸಕ್ರಿಯರಾಗಿದ್ದರು. ಈ ಮಧ್ಯೆ ರೋಗ ಉಲ್ಬಣಗೊಂಡು ನಿಧನ ಸಂಭವಿ ಸಿದೆ. ರಾಮನ್- ಜಾನಕಿ ದಂಪತಿ ಪುತ್ರಿಯಾದ ಮೃತರು ಪತಿ ವಿ. ರಾಜೀವನ್ (ಅಸಿಸ್ಟೆಂಟ್ ಇಂಜಿನಿ ಯರ್, ಕೆಎಸ್‌ಇಬಿ ಸೀತಾಂ ಗೋಳಿ), ಮಕ್ಕಳಾದ ಋತುವರ್ಣ ರಾಜ್, ಋತ್ವಿಕ್‌ರಾಜ್, ಸಹೋದರ ರಾದ ರಘುವರನ್, ರಾಜೇಶ್ ಕುಮಾರ್ (ಸೈಂಟಿಸ್ಟ್ ಪೂನ), ಸಹೋದರಿ ವಿಜಯ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries