ಕಾಸರಗೊಡು: ಕೇರಳದ ಸೌರ ಕೇಂದ್ರದ ಹಬ್ ಆಗುವ ಎಲ್ಲಾ ಸಾಮಥ್ರ್ಯವನ್ನು ಕಾಸರಗೋಡು ಹೊಂದಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅವರು ಚೀಮೇನಿ ಪಂಚಾಯತ್ ಮೈದಾನದಲ್ಲಿ ತೋಟಗಾರರಿಕಾ ನಿಗಮದ ಚೀಮೇನಿ ಮತ್ತು ಪೆರಡಾಲ ಎಸ್ಟೇಟ್‍ಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಪ್ರಸಕ್ತ ಪೈವಳಿಕೆ, ಅಂಬಲತ್ತರ ಮತ್ತು ಕರಿಂದಳದಲ್ಲಿ ಸೌರ ಉದ್ಯಾನವನಗಳಿವೆ. ಚೀಮೇನಿ ಮತ್ತು ಪೆರಡಾಲದಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಯೊಂದಿಗೆ ಕಾಸರಗೋಡು ಕೂಡಾ ಇದೇ ಸಾಳಿಗೆ ಸೇರ್ಪಡೆಯಾಗಲಿದೆ.
ತೋಟಗಾರರಿಕಾ ನಿಗಮದ ಚೀಮೇನಿ ಮತ್ತು ಪೆರಡಾಲ ಎಸ್ಟೇಟ್‍ನಲ್ಲಿ 300ಎಕರೆ ಜಾಗ ಲಭ್ಯವಿದೆ. ಒಂದು ಎಕರೆ ಪ್ರದೇಶದಲ್ಲಿ ಸೌರ ಸ್ಥಾವರವನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಇಚ್ಛಿಸುವ ಆಸಕ್ತ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಕಂಪೆನಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ವಿ. ಜಾನಕಿ, ವಾರ್ಡ್ ಸದಸ್ಯೆ ಎ.ವಿ. ಲಲಿತಾ, ವಿವಿಧ ರಾಜಕೀಯಪಕ್ಷದ ಪ್ರತಿನಿಧಿಗಳು ಪಾಲ್ಗೊಮಡಿದ್ದರು. ನೇಚರ್ ಡ್ಯೂ ಎನರ್ಜಿ ಎಂಡಿ ಮಾಹಿನ್ ಸುಬೈರ್ ಸ್ವಾಗತಿಸಿದರು. ಕೇರಳ ಪ್ಲಾಂಟೇಶನ್ ಕಾಪೆರ್Çರೇಷನ್ ಅಧ್ಯಕ್ಷ ಒ.ಪಿ. ಸಲಾಂ ವಂದಿಸಿದರು.


