ಕಾಸರಗೊಡು: ಪರಿಶಿಷ್ಟ ಪಂಗಡ ಅಭಿವೃದ್ಧಿ ಕಚೇರಿಯ ವ್ಯಾಪ್ತಿಗೆ ಬರುವ ಮಂಜೇಶ್ವರ ಗ್ರಾಮ ಪಂಚಾಯತಿಯ ಪರಿಶಿಷ್ಟ ಪಂಗಡದ ಪ್ರಮೋಟರ್‍ಗಳ ತಾತ್ಕಾಲಿಕ ನೇಮಕಾತಿಗಾಗಿ ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರುವ ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದು. ಪಿ.ವಿ.ಟಿ.ಜಿ. ಆದಿಯಾ, ಮಲಪಂಡಾರ, ಪನಿಯಾ ವರ್ಗಗಳಿಗೆ ಎಂಟನೇ ತರಗತಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ.
20ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಘಿದ್ದು, ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಜಾತಿ ಸರ್ಟಿಫಿಕೇಟ್ ಮತ್ತು ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಫೆ. 11ರಂದು ಬೆಳಗ್ಗೆ 10.30 ಕ್ಕೆ ಕಾಸರಗೋಡಿನ ಪರಿಶಿಷ್ಟ ಪಂಗಡ ಅಭಿವೃದ್ಧಿ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದವರಿಗೆ ಟಿಎ ಸೇರಿದಂತೆ ತಿಂಗಳಿಗೆ ರೂ. 13,500 ಗೌರವಧನ ಲಭಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994-255466) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


