ಕಾಸರಗೋಡು: ಮದ್ಯದ ನಶೆಯಲ್ಲಿ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿದ ಖಾಸಗಿ ಬಸ್ ನಿರ್ವಾಹಕ, ಕೂತುಪರಂಬ ನಿವಾಸಿ ಸಿ.ವಿ ಶಿಜು ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಸರರಗೋಡು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‍ನಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ ಜಗಳಕ್ಕಿಳಿಯುತ್ತಿದ್ದಂತೆ ಸಹ ಪ್ರಯಾಣಿಕರೊಬ್ಬರು ಈ ಬಗ್ಗೆಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್.ಐ ಅಬ್ದುಲ್ ಸಲಾಂ ನೇತೃತ್ವದ ಪೊಲೀಸರ ತಂಡ ಬಸ್ ತಡೆದು, ನಿರ್ವಾಹಕ ಶಿಜುನನ್ನು ವಶಕ್ಕೆ ತೆಗೆದುಕೊಂಡಿದ್ದರು.

