ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಸ್ಕೂಟರ್ ಡಿಕ್ಕಿಯಾಗಿ ಉಪ್ಪಳ ಪಚ್ಚಂಬಳ ನಿವಾಸಿ, ಬಾಯಾರು ಸನಿಹದ ಕನ್ಯಾನ ಮಂಡಿಯೂರಿನಲ್ಲಿ ವಾಸಿಸುತ್ತಿರುವ ಬದರುಲ್ ಮುನೀರ್(38)ಮೃತಪಟ್ಟಿದ್ದಾರೆ.ಹೋಟೆಲ್ ಕಾರ್ಮಿಕರಾಗಿದ್ದ ಇವರು ತಮ್ಮ ಸಕೂಟರಲ್ಲಿ ಸಂಚರಿಸುವ ಮಧ್ಯೆ ಅಪಘಾತ ನಡೆದಿದೆ. ಸ್ಥಳದಲ್ಲಿದ್ದವರು ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.


