ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುಣ್ಯತಿಥಿಯಂದು ಸಾಯಿರಾಂ ಕೃಷ್ಣ ಭಟ್ ಅವರು ಬಡಜನತೆಗೆ ವಿವಿಧ ರೀತಿಯಲ್ಲಿ ನೆರವಾದರು. ಪುಷ್ಪ ಬಾರಡ್ಕ, ಆಯಿಶಾ ಬಂಬ್ರಾಣ, ಕೃತ್ತಿಕ ಗೋಳಿಯಡ್ಕ ಅವರಿಗೆ ಸ್ವ ಉದ್ಯೋಗಕ್ಕೆ ಹೊಲಿಗೆ ಯಂತ್ರ, ಉಷಾ ಮುಜುಂಗಾವು ಅವರಿಗೆ ವಿವಾಹ ಧನಸಹಾಯವನ್ನು ನೀಡಲಾಯಿತು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಶಂಕರ ಅವರು ಫಲಾನುಭವಿಗಳಿಗೆ ನೆರವು ಹಸ್ತಾಂತರಿಸಿದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸಂದೇಶ ವಾರಣಾಶಿ, ಸತ್ಯನಾರಾಯಣ ಭಟ್ ಗೋಳಿತ್ತಡ್ಕ, ವಿಷ್ಣು ಭಟ್ ಪಾಲಾರು, ಉದನೇಶ್ವರ ಭಟ್ ಅಳಿಕೆ, ಗೋಪಾಲಕೃಷ್ಣ ಭಟ್ ಅಳಿಕೆ, ರಾಮಪ್ರಸಾದ ಕೋರೆಕ್ಕಾನ, ಸಂಜೀವ ರೈ ಮೊದಲಾದವರು ಜೊತೆಗಿದ್ದರು. ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

.jpg)
