ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ ಹಾಗೂ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಪಾಲಿಯೇಟಿವ್ ಕೇರ್ ಕುಟುಂಬ ಸಂಗಮ ನಡೆಯಿತು.
ಕುಂಬ್ಡಾಜೆ ಎ-ಎಚ್‍ಸಿಯಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಮುಖ್ಯ ಅತಿಥಿಯಾಗಿದ್ದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಎ.ಸಿ. ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಕಿಟ್ ವಿತರಣೆಯಲ್ಲಿ ತಂತ್ರಿವರ್ಯ ಶಂಕರ ನಾರಾಯಣ ಭಟ್, ಕುಂಬ್ಡಾಜೆ ಜುಮಾ ಮಸೀದಿಯ ಹಸೈನಾರ್ ಫೈಝಿ ಹಾಗೂ ನಾರಂಪಾಡಿ ಸಂತ ಜಾನ್ ಡಿ ಬ್ರಿಟೊ ಚರ್ಚ್‍ನ ಪ್ರಸೀಲಾ ಡಿಸೋಜಾ ನಿರ್ವಹಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್ ಅಜ್ಜಿಮೂಲೆ, ಅಬ್ದುಲ್ಲ ಕುಂuಟಿಜeಜಿiಟಿeಜ, ಮಹಮ್ಮದ್ ಕುಂuಟಿಜeಜಿiಟಿeಜ, ನೂರುದ್ದೀನ್ ಬೆಳಿಂಜ, ಗೀತಾ ಡಿ., ಕೊರಗಪ್ಪ ಬೆಳ್ಳಿಗೆ, ಬಬಿತಾ ರೇಷ್ಮಾ, ಸೌಭಾಗ್ಯ ಲಕ್ಷ್ಮಿ, ಆಯಿಷತ್ ಮಸೀದಾ, ಪಂಚಾಯಿತಿ ಕಾರ್ಯದರ್ಶಿ ರಾಜೇಶ್, ರೋಶನಿ, ರಂಜೂಷಾ, ಮಾತನಾಡಿದರು.
ಆರಂಭದಲ್ಲಿ ವೈದ್ಯಾ?ಕಾರಿ ಡಾ. ಸೈಯದ್ ಹಮೀದ್ ಶುಹೈಬ್ ಸ್ವಾಗತಿಸಿದರು ಮತ್ತು ಆರೋಗ್ಯ ನಿರೀಕ್ಷಕ ಸುರೇಶ್ ಕುಮಾರ್ ವಂದಿಸಿದರು. ಬಳಿಕ ಸ್ನೇಹ ಸಂಗಮದಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಿತು.

.jpg)
