ಮಂಜೇಶ್ವರ: ಇತ್ತೀಚೆಗೆ ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಚಿಗುರುಪಾದೆ ಎಂಬ ನೂತನ ಭಜನಾ ತಂಡದದ ಉದ್ಘಾಟನೆಯನ್ನು ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣತಂತ್ರಿಗಳು ಉದ್ಘಾಟಿಸಿ ಆಶೀರ್ವದಿಸಿದರು. ವೇದಮೂರ್ತಿ ಗಣೇಶ ನಾವಡ ಮೀಯಪದವು, ವಸಂತ ಭಟ್ ತೊಟ್ಟೆತ್ತೋಡಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹಾಗೂ ಪುಷ್ಪರಾಜ ಶೆಟ್ಟಿ ತಲೇಕಳ ನೇತೃತ್ವ ವಹಿಸಿದ್ದರು ಹಾಗೂ ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

.jpg)
