HEALTH TIPS

ಅಲ್ಪಮಟ್ಟಿಗೆ ಕುಸಿತ ಕಂಡ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ಏರಿಳಿತದ ನಂತರ ಚಿನ್ನ-ಬೆಳ್ಳಿ ಬೆಲೆಗಳು ಸ್ಥಿರವಾಗುತ್ತಿವೆ. ಕಳೆದ ಎರಡು ದಿನಗಳಲ್ಲಿ ಬೆಲೆಗಳು ಅಲ್ಪ ಮಟ್ಟಿನ ಏರಿಕೆ ಮತ್ತು ಕುಸಿತವನ್ನು ತೋರಿಸಿವೆ.

ಕಳೆದ ವಾರಾಂತ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ, ಸೋಮವಾರದಿಂದ ಅಲ್ಪ ಏರಿಕೆ ಕಂಡಿತ್ತು.ಮಂಗಳವಾರ ಮತ್ತು ಬುಧವಾರದಂದು ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದೆ. ಬೆಳ್ಳಿಯೂ ಕುಸಿತ ಕಂಡು 2,90,000 ಲಕ್ಷ ರೂ. ಗೆ ಬಂದು ನಿಂತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ಏರಿಳಿತದ ನಂತರ ಚಿನ್ನ-ಬೆಳ್ಳಿ ಬೆಲೆಗಳು ಸ್ಥಿರವಾಗುತ್ತಿವೆ. ಆದರೆ ಹೂಡಿಕೆ ಮತ್ತು ಔದ್ಯೋಗಿಕ ಬೇಡಿಕೆಯಿಂದಾಗಿ ಸರಕುಗಳ ಸಂಗ್ರಹ ಬಸಿದು ಹೋಗುತ್ತಿರುವಾಗ ಚೀನಾದಲ್ಲಿ ಸರಬರಾಜುಗಳು ಇನ್ನೂ ಒತ್ತಡದಲ್ಲಿವೆ. ದೇಸಿ ಉತ್ಪಾದಕರು ಮತ್ತು ವ್ಯಾಪಾರಿಗಳು ಬಾಕಿ ಉಳಿದಿರುವ ಆರ್ಡರ್ ಗಳನ್ನು ತುಂಬಲು ಹೆಣಗಾಡುತ್ತಿದ್ದಾರೆ. ಜನವರಿ 29ರಂದು ಅಮೂಲ್ಯ ಲೋಹಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ಕುಸಿದವು. ಈ ಏರಿಕೆ ಬಹಳ ವೇಗವಾಗಿದ್ದ ಕಾರಣ ವೇಗದ ಕುಸಿತ ಕಂಡಿದೆ. ಕಳೆದ ಶುಕ್ರವಾರದ ಮುಕ್ತಾಯದಲ್ಲಿ ಜನವರಿ 29ರ ಗರಿಷ್ಠ ಮಟ್ಟದಿಂದ ಶೇ 11ರಷ್ಟು ಕುಸಿತ ಕಂಡಿತ್ತು. ಆದರೆ ಜನವರಿ ತಿಂಗಳಲ್ಲಿ ಶೇ 15ರಷ್ಟು ಏರಿಕೆಯಾಗಿತ್ತು.

ಇಂದು ಬುಧವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ 1,58,790 ರೂ. ಮತ್ತು 22 ಕ್ಯಾರೆಟ್ ಆಭರಣ ಚಿನ್ನದ 10 ಗ್ರಾಂ ಬೆಲೆ 1,45,460 ರೂ. ಗೆ ಮತ್ತು 18 ಕ್ಯಾರೆಟ್ ನ ಚಿನ್ನದ 10 ಗ್ರಾಂ ಬೆಲೆ 1,19,100 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಬುಧವಾರ ಫೆಬ್ರವರಿ 11ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,851 (-27)ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,530 (-25) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,889 (-20) ರೂ. ಬೆಲೆಗೆ ತಲುಪಿದೆ.

ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆ

ಕಳೆದ ವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಸೋಮವಾರ ಅಲ್ಪ ಏರಿಕೆ ಕಂಡಿತ್ತು. ಆದರೆ ಮಂಗಳವಾರ ಮತ್ತೆ ಕುಸಿದಿದೆ. ಇಂದು ಮಾರುಕಟ್ಟೆ ತೆರೆದ ತಕ್ಷಣ ಅಲ್ಪ ಕುಸಿದ ಬೆಳ್ಳಿ ಕೆಜಿಗೆ 2,90,000 ಲಕ್ಷ ರೂ. ಗೆ ಬಂದು ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,866 (-27) ರೂ., 22 ಕ್ಯಾರೆಟ್ ಚಿನ್ನದ ದರ 14,545 (-25) ರೂ.

ಮುಂಬೈ: 4 ಕ್ಯಾರೆಟ್ ಚಿನ್ನದ ದರ 15,851 (-27) ರೂ., 22 ಕ್ಯಾರೆಟ್ ಚಿನ್ನದ ದರ 14,530 (-25) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,856 (-27) ರೂ., 22 ಕ್ಯಾರೆಟ್ ಚಿನ್ನದ ದರ 14,535 (-25) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,928 (+22) ರೂ., 22 ಕ್ಯಾರೆಟ್ ಚಿನ್ನದ ದರ 14,600 (+20) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,851 (-27) ರೂ., 22 ಕ್ಯಾರೆಟ್ ಚಿನ್ನದ ದರ 14,530 (-25) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,851 (-27) ರೂ., 22 ಕ್ಯಾರೆಟ್ ಚಿನ್ನದ ದರ 14,530 (-25) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 15,866 (-27) ರೂ., 22 ಕ್ಯಾರೆಟ್ ಚಿನ್ನದ ದರ 14,545 (-25) ರೂ.

ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,856 (-27) ರೂ., 22 ಕ್ಯಾರೆಟ್ ಚಿನ್ನದ ದರ 14,535 (-25) ರೂ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries