HEALTH TIPS

ಎಪ್ಸ್ಟೀನ್ ಜೊತೆ ಕಳೆದ 'ಪ್ರತಿ ನಿಮಿಷ'ಕ್ಕೂ ವಿಷಾದ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್: ಶಿಕ್ಷೆಗೆ ಗುರಿಯಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಕಳೆದ "ಪ್ರತಿ ನಿಮಿಷಕ್ಕೂ ವಿಷಾದಿಸುತ್ತೇನೆ, ಕ್ಷಮೆಯಾಚಿಸುತ್ತೇನೆ" ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಕೊಡುಗೈದಾನಿ ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ.

ಇದೇ ವೇಳೆ, ಎಪ್ಸ್ಟೀನ್ ಜೊತೆಗಿನ ಸಂಬಂಧದ ಕುರಿತು ಇನ್ನೂ ಅನೇಕ ಪ್ರಶ್ನೆಗಳು ಉಳಿದಿವೆ ಎಂದು ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಹೇಳಿದ್ದಾರೆ.

ಕಳೆದ ವಾರ ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಗಳ ಇತ್ತೀಚಿನ ಕಂತಿನಲ್ಲಿ ಎಪ್ಸ್ಟೀನ್ ಮತ್ತು ಅನೇಕ ಪ್ರಮುಖ ವ್ಯಕ್ತಿಗಳ ನಡುವಿನ ಇಮೇಲ್‌ ಗಳು, ಸಂಪರ್ಕಗಳು ಹಾಗೂ ಉಲ್ಲೇಖಗಳು ಬಹಿರಂಗಗೊಂಡಿವೆ. ಈ ದಾಖಲೆಗಳಲ್ಲಿ ಆತ್ಮೀಯ ಸ್ನೇಹ, ಅಕ್ರಮ ಹಣಕಾಸು ವ್ಯವಹಾರಗಳು ಮತ್ತು ಖಾಸಗಿ ಫೋಟೋಗಳಿಗೆ ಸಂಬಂಧಿಸಿದ ವಿವರಗಳು ಸೇರಿರುವುದಾಗಿ ತಿಳಿದುಬಂದಿದೆ.

ದಾಖಲೆಗಳ ಪೈಕಿ ಒಂದು ಕರಡು ಇಮೇಲ್‌ ನಲ್ಲಿ, ಗೇಟ್ಸ್ ಅವರು ವಿವಾಹೇತರ ಸಂಬಂಧಗಳಲ್ಲಿ ತೊಡಗಿದ್ದಾರೆ ಎಂದು ಎಪ್ಸ್ಟೀನ್ ಆರೋಪಿಸಿರುವುದು ಕಾಣಿಸಿಕೊಂಡಿದೆ. ಗೇಟ್ಸ್ ಅವರೊಂದಿಗೆ ತನ್ನ ಸಂಬಂಧವು "ರಷ್ಯಾದ ಹುಡುಗಿಯರೊಂದಿಗೆ ಲೈಂಗಿಕ ಸಂಪರ್ಕಗಳ ಪರಿಣಾಮಗಳನ್ನು ಎದುರಿಸಲು ಬಿಲ್‌ ಗೆ ಮಾದಕ ದ್ರವ್ಯಗಳನ್ನು ಒದಗಿಸುವುದರಿಂದ ಹಿಡಿದು, ವಿವಾಹಿತ ಮಹಿಳೆಯರೊಂದಿಗೆ ಅವರ ಅಕ್ರಮ ಸಂಬಂಧಗಳನ್ನು ಸುಗಮಗೊಳಿಸುವವರೆಗೆ" ವ್ಯಾಪಿಸಿದೆ ಎಂದು ಆ ಕರಡು ಇಮೇಲ್‌ ನಲ್ಲಿ ಉಲ್ಲೇಖಿಸಿದ್ದಾಗಿ ದಾಖಲೆಗಳು ಸೂಚಿಸುತ್ತವೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಲ್ ಗೇಟ್ಸ್ ಅವರು ಬುಧವಾರ (ಫೆ. 4, 2026) ಪ್ರಸಾರವಾದ '9 ನ್ಯೂಸ್ ಆಸ್ಟ್ರೇಲಿಯಾ' ಸಂದರ್ಶನದಲ್ಲಿ, "ಆ ಇಮೇಲ್ ಎಂದಿಗೂ ಕಳುಹಿಸಲಾಗಿಲ್ಲ. ಅದು ಸುಳ್ಳು. ಅವರ ಉದ್ದೇಶವೇನು ಎಂಬುದು ನನಗೆ ತಿಳಿದಿಲ್ಲ. ಯಾವುದೋ ರೀತಿಯಲ್ಲಿ ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ಜೈಲಿನಲ್ಲಿ ಮೃತಪಟ್ಟ ಎಪ್ಸ್ಟೀನ್ ಅವರ ತನಿಖೆಗೆ ಸಂಬಂಧಿಸಿದ ಲಕ್ಷಾಂತರ ಫೈಲ್‌ ಗಳ ಹೊಸ ಸಂಗ್ರಹ ಬಿಡುಗಡೆಯಾದ ಬಳಿಕ ಗೇಟ್ಸ್ ಅವರ ವಕ್ತಾರರೂ ಆರೋಪಗಳನ್ನು ನಿರಾಕರಿಸಿದ್ದಾರೆ. "ಈ ದಾಖಲೆಗಳು ತೋರಿಸುವ ಏಕೈಕ ಸಂಗತಿ ಎಂದರೆ, ಬಿಲ್ ಗೇಟ್ಸ್ ಅವರೊಂದಿಗೆ ನಿರಂತರ ಸಂಪರ್ಕ ಹೊಂದಲು ಸಾಧ್ಯವಾಗದೇ ಎಪ್ಸ್ಟೀನ್ ಹೊಂದಿದ್ದ ಹತಾಶೆ ಮತ್ತು ಅವರನ್ನು ಬಲೆಗೆ ಬೀಳಿಸಲು, ಮಾನಹಾನಿ ಮಾಡಲು ಆತನ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧರಾಗಿದ್ದ ಎಂಬುದು," ಎಂದು ವಕ್ತಾರರು ತಿಳಿಸಿದ್ದಾರೆ.

ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರು ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ದಾಖಲೆಗಳ ಬಿಡುಗಡಯು "ನನ್ನ ವಿವಾಹ ಜೀವನದ ಕೆಲವು ನೋವಿನ ಸಂದರ್ಭಗಳ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತು" ಎಂದಿದ್ದಾರೆ. "ಆ ವಿವರಗಳು ಹೊರಬಂದಾಗಲೆಲ್ಲಾ ನನಗೆ ವೈಯಕ್ತಿಕವಾಗಿ ತುಂಬಾ ನೋವಾಗುತ್ತದೆ. ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ, ಎಲ್ಲವನ್ನೂ ತಿಳಿದುಕೊಳ್ಳಲು ಸಹ ಸಾಧ್ಯವಿಲ್ಲ. ಆ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ಆ ವ್ಯಕ್ತಿಗಳೇ, ನನ್ನ ಮಾಜಿ ಪತಿಯೂ ಸೇರಿ," ಎಂದು ಹೇಳಿದ್ದಾರೆ. ಗೇಟ್ಸ್ ದಂಪತಿಗಳು 2021ರಲ್ಲಿ ವಿಚ್ಛೇದನ ಪಡೆದಿದ್ದರು.

'9 ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಗೇಟ್ಸ್ ಅವರು, 2011ರಲ್ಲಿ ಎಪ್ಸ್ಟೀನ್ ನನ್ನು ಮೊದಲ ಬಾರಿ ಭೇಟಿಯಾದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಹಲವಾರು ಬಾರಿ ಭೋಜನಕೂಟಗಳಲ್ಲಿ ಭಾಗವಹಿಸಿದ್ದೇನೆ ಎಂದರೂ, ಎಪ್ಸ್ಟೀನ್ ನ ಕೆರಿಬಿಯನ್ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿಲ್ಲ ಹಾಗೂ ಮಹಿಳೆಯರೊಂದಿಗೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. "ಆತ ಸದಾ ಗಮನ ಸೆಳೆಯುವ ವ್ಯಕ್ತಿಯಾಗಿದ್ದ. ಅನೇಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಹೊಂದಿದ್ದ ಮತ್ತು ಜಾಗತಿಕ ಆರೋಗ್ಯ ಯೋಜನೆಗಳಿಗೆ ಅವರಿಂದ ಹಣ ಸಂಗ್ರಹಿಸಬಹುದು ಎಂದು ಹೇಳುತ್ತಿದ್ದ. ಹಿಂತಿರುಗಿ ನೋಡಿದಾಗ ಅದು ತಪ್ಪು ನಿರ್ಧಾರವಾಗಿತ್ತು," ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries