HEALTH TIPS

ಪತ್ರಕರ್ತ ಕೆ. ಕೃಷ್ಣನ್ ಸಂಸ್ಮರಣೆ, ಮಾಧ್ಯಮ ಪ್ರಶಸ್ತಿಪ್ರದಾನ ಸಮಾರಂಭ

ಕಾಸರಗೋಡು: ಪ್ರೆಸ್ ಕ್ಲಬ್‍ನ ಸ್ಥಾಪಕ ಕಾರ್ಯದರ್ಶಿ ಕೆ. ಕೃಷ್ಣನ್ ಅವರ ಸಂಸ್ಮರಣಾ ಸಮಾರಂಭ ಹಾಗೂ ಕೃಷ್ಣನ್ ಸ್ಮರಣಾರ್ಥ ಪ್ರೆಸ್ ಕ್ಲಬ್ ಮತ್ತು ಅವರ ಕುಟುಂಬದವರು ವಿಶೇಷ ಸಾಧನೆ ಮಾಡಿದ ಪತ್ರಕರ್ತರಿಗಾಗಿ ಕೊಡಮಾಡುವ ಪ್ರಶಸ್ತಿ ಪ್ರದಾನ ಸಮಾರಂಭ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಜರುಗಿತು.

ಮಲಯಾಳ ಮನೋರಮಾ ನೀಲೇಶ್ವರ ವರದಿಗಾರ ಸಂದೀಪ್ ಚಂದ್ರನ್ ಅವರ ವಿಶೇಷ ವರದಿ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಹಿರಿಯಪತ್ರಕರ್ತರಾದ ಜಯಕೃಷ್ಣನ್ ನರಿಕುಟ್ಟಿ ಮತ್ತು ಸನ್ನಿ ಜೋಸೆಫ್ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. 

ಪ್ರೆಸ್ ಕ್ಲಬ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಪ್ರಶಸ್ತಿ ಪ್ರದಾನ ಮಾಡಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಶಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಎ. ಅಬ್ದುಲ್ ರಹಮಾನ್ ಸಂಸ್ಮರಣಾ ಭಾಷಣ ಮಾಡಿದರು. ಪ್ರೆಸ್‍ಕ್ಲಬ್  ಕಾರ್ಯದರ್ಶಿ ಪ್ರದೀಪ್‍ನಾರಾಯಣ್ ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ ವಂದಿಸಿದರು. ಪ್ರಶಸ್ತಿ ಹತ್ತು ಸಾವಿರ ರೂ.. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries