ಬದಿಯಡ್ಕ : ನಾರಂಪಾಡಿ ಶ್ರೀ ಉಮಾಮಹೇಶ್ವರ ದೆವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಸಂದರ್ಭ ಶಿವಗಿರಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಪ್ರಾಯೋಜಕತ್ವದಲ್ಲಿ ನಾಟ್ಯಾಲಯ ನೀರ್ಚಾಲು ಇವರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜರಗಿತು. ವಿದುಷಿ ಅಶ್ವಿನಿ ಕೆ.ಎಂ. ಮತ್ತು ವಿಷಯ ಬಾಲಕೃಷ್ಣನ್ ಶಿವಾರ್ಪಣಂ ನೃತ್ಯ ಪ್ರಸ್ತುತಪಡಿಸಿದರು. ಕ್ಲಬ್ಬಿನ ಪದಾಧಿಕಾರಿಗಳು ಕಲಾವಿದರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು.


