ಕಾಸರಗೋಡು: ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕುತ್ತಿಗೆಗೆ ಕೆಎಸ್.ಯು.ಕಾರ್ಯಕರ್ತರು ಗಾಯಗೊಳಿಸಿದರೆಂಬ ದೂರಿಗೆ ಕಾಸರಗೋಡು ಸಂಸದ ವ್ಯಂಗ್ಯವಾಡಿದರು, ಅದು ಮಗುವಿನ ಕೃತ್ಯವಾಗಿರಬೇಕು ಎಂದು ಹೇಳಿದರು.
ಕೆಎಸ್‍ಯು ಮಕ್ಕಳು ಸಚಿವರನ್ನು ಮುಟ್ಟಲಿಲ್ಲ. ಸಚಿವರನ್ನು ತಕ್ಷಣ ಅಮೆರಿಕಕ್ಕೆ ಸ್ಥಳಾಂತರಿಸಬೇಕು ಮತ್ತು ಪರಿಯಾರಂನಲ್ಲಿ ಮುಂದುವರಿದರೆ ಕತ್ತರಿ ಕುತ್ತಿಗೆಯೊಳಗೆ ಸಿಲುಕಿಕೊಂಡೀತು ಎಂದು ರಾಜ್‍ಮೋಹನ್ ಉಣ್ಣಿತ್ತಾನ್ ಲೇವಡಿ ಮಾಡಿದರು.
ನಾವು ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಆರೋಗ್ಯ ಮುಖ್ಯ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಮುಖ್ಯಮಂತ್ರಿಗೆ ಸವಾಲು ಹಾಕುತ್ತಿದ್ದೇನೆ ಎಂದು ರಾಜ್‍ಮೋಹನ್ ಉಣ್ಣಿತಾನ್ ಹೇಳಿರುವರು.

