HEALTH TIPS

ಜಿ.ಕೆ ಶೆಟ್ಟಿ ನಿಧನ

ಕಾಸರಗೋಡು: ನಗರದ ಕೇಳುಗುಡ್ಡೆ ನಿವಾಸಿ, ಹಿರಿಯ ರಂಗಕರ್ಮಿ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಜಿ.ಕೆ ಶೆಟ್ಟಿ ಎಂದೇ ಖ್ಯಾತರಾಗಿದ್ದ ಗೋಪಾಲಕೃಷ್ಣ ಶೆಟ್ಟಿ(80)ಅಲ್ಪ ಕಾಲದ ಅಸೌಖ್ಯದಿಂದ ಕೇಳುಗುಡ್ಡೆಯ ಗಿರಿಜಾ ನಿವಾಸದಲ್ಲಿ ಬುಧವಾರ ನಿಧನರಾದರು. 

ಕಾಸರಗೋಡಿನ ಕನ್ನಡ ಸಾಂಸ್ಕøತಿಕ ರಂಗದ ರಾಯಭಾರಿ ಎನಿಸಿಕೊಂಡಿದ್ದರು.  ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ, ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷರಾಘಿದ್ದ ಇವರು, ರಂಗಕರ್ಮಿಯಾಗಿ ಕಾಸರಗೋಡಿನ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದರು.  ಯವನಿಕಾ(ರಿ) ಕಾಸರಗೋಡು ಸಂಸ್ಥೆಯ ಸಂಚಾಲಕ, ಅಧ್ಯಕ್ಷನಾಗಿ ದುಡಿದಿದ್ದ ಇವರು ಕನ್ನಡದ ಪ್ರಮುಖ ನಾಟಕಗಳು ಕಾಸರಗೋಡಿನಲ್ಲಿ ಪ್ರದರ್ಶನಗೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು. ನಟನೆ, ಕಲೆ ಮತ್ತು ಸಾಹಿತ್ಯದ ಆರಾಧಕರಾಗಿದ್ದರು.  ಕೇರಳದ ಆಲಪ್ಪುಯ, ಇಡುಕ್ಕಿ ಮತ್ತು ಕಾಸರಗೋಡಿನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಪತ್ನಿ ಗೀತಾ ಈ ಹಿಂದೆ ನಿಧನರಾಗಿದ್ದು, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries