ಬದಿಯಡ್ಕ: ನೆಕ್ರಾಜೆ ಪುಂಡೂರು ನಿವಾಸಿ, ನಿವೃತ್ತ ಯೋಧ ಗೋಪಾಲನ್(64)ಅವರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಆಹಾರ ಸೇವಿಸಿ ಮಲಗಿದ್ದ ಇವರು,ಬೆಳಗ್ಗೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಡುವ ಮಧ್ಯೆ ಬಾವಿ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


