HEALTH TIPS

ಈ ಡೇಂಜರಸ್ ಆಯಪ್​ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್​ನಲ್ಲಿ ಇವು ಇವೆಯಾ ಪರಿಶೀಲಿಸಿ

ಸ್ಮಾರ್ಟ್‌ಫೋನ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದು ಸಾಮಾನ್ಯ. ಖಾಸಗಿ ಫೋಟೋಗಳು, ವಿಡಿಯೋಗಳಿಂದ ಹಿಡಿದು ಗೌಪ್ಯ ಮಾಹಿತಿಯವರೆಗೂ ಫೋನ್​ನಲ್ಲಿ ಇರುತ್ತವೆ. ಫೋನ್ ಕಳುವಾಗದಂತೆ ಜೋಪಾನವಾಗಿಟ್ಟುಕೊಂಡರೆ ಸಾಕು ಎಂದು ನಾವೆಲ್ಲರೂ ಭಾವಿಸಿರುತ್ತೇವೆ.

ಆದರೆ, ವಾಸ್ತವವೆಂದರೆ ನಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಮಾಹಿತಿ ನಮಗೆ ಗೊತ್ತಿಲ್ಲದಂತೆ ಸೋರಿಕೆ ಆಗುತ್ತಿರಬಹುದು. ನಾವು ಇನ್​ಸ್ಟಾಲ್ ಮಾಡಿಕೊಂಡಿರುವ ಕೆಲ ಆ್ಯಪ್​ಗಳು ನಮ್ಮ ಡಾಟಾವನ್ನು ಕದ್ದು ಸಾಗಿಸುತ್ತಿರುವ ಸಾಧ್ಯತೆ ಹೆಚ್ಚಿರುತ್ತದೆ. ಫೋನ್​ನಲ್ಲಿರುವ ಫೋಟೋ, ವಿಡಿಯೋ, ನಾವಿರುವ ಸ್ಥಳ, ನಾವು ಅಡ್ಡಾಡಿರುವ ಸ್ಥಳ, ಮೊಬೈಲ್​ನ ಮಾಹಿತಿ, ಬ್ರೌಸಿಂಗ್ ಹಿಸ್ಟರಿ, ನಮ್ಮ ಫೋನ್ ಕಾಲ್ ಇತ್ಯಾದಿ ನಾನಾ ಮಾಹಿತಿಯನ್ನು ನಮಗೆ ಅರಿವಾಗದಂತೆ ಲಪಟಾಯಿಸಬಹುದು.

ನಮ್ಮ ಡಾಟಾ ತೆಗೆದುಕೊಂಡು ಏನು ಮಾಡುತ್ತಾರೆ?

ನಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಮಾಹಿತಿಯನ್ನು ಕದಿಯುವ ಆ್ಯಪ್​ಗಳು, ಅದನ್ನು ಥರ್ಡ್ ಪಾರ್ಟಿ ಸರ್ವರ್​ಗಳಿಗೆ ರವಾನಿಸುತ್ತದೆ. ಆ್ಯಡ್ ಸರ್ವಿಸ್​ನಿಂದ ಹಿಡಿದು ಪ್ರೊಫೈಲಿಂಗ್​ವರೆಗೂ ಎಲ್ಲದಕ್ಕೂ ಈ ಮಾಹಿತಿಯನ್ನು ಬಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂದರೆ, ನೀವು ಯಾವುದಾದರೂ ವಿಚಾರದ ಬಗ್ಗೆ ಫೋನ್​ನಲ್ಲಿ ಬ್ರೌಸ್ ಮಾಡಿದಾಗ, ಆ ವಿಚಾರಕ್ಕೆ ಸಂಬಂಧಿಸಿದ ಜಾಹೀರಾತು ನಿಮಗೆ ಕಾಣುತ್ತದೆ. ಇದು ಯಾಕೆಂದರೆ, ನಿಮ್ಮ ಬ್ರೌಸಿಂಗ್ ಮಾಹಿತಿಯನ್ನು ಆ್ಯಪ್​ಗಳು ಜಾಹೀರಾತು ಏಜೆನ್ಸಿಗಳಿಗೆ ಮಾರಿಬಿಟ್ಟಿರಬಹುದು. ಹೀಗಾಗಿ, ತೀರಾ ವೈಯಕ್ತೀಕರಿಸಿದ ಜಾಹೀರಾತು ಕಾಣುತ್ತವೆ. ನಿಮ್ಮ ಸೂಕ್ಷ್ಮ ದತ್ತಾಂಶವನ್ನು ಕದಿಯಬಲ್ಲ ಆ್ಯಪ್​ಗಳು ಎಂಥವಿರಬಹುದು?

1. ಉಚಿತ VPN ಅಪ್ಲಿಕೇಶನ್‌ಗಳು

ಉಚಿತ VPN ಆ್ಯಪ್​ಗಳು ಬಹಳ ರಿಸ್ಕಿ ಎನಿಸುತ್ತವೆ. ವಿಪಿಎನ್ ಕನೆಕ್ಷನ್​ನಲ್ಲಿ ನಿಮ್ಮ ಗುರುತು ಮತ್ತು ಸ್ಥಳ ಮರೆಮಾಚಿ ಇಂಟರ್ನೆಟ್ ಅನ್ನು ಗೌಪ್ಯವಾಗಿ ವೀಕ್ಷಿಸಲು ಸಾಧ್ಯ. ಆದರೆ, ಉಚಿತ ವಿಪಿಎನ್​ಗಳು ನಿಮ್ಮ ಎಲ್ಲಾ ಬ್ರೌಸಿಂಗ್ ಡಾಟಾ, ನಿಮ್ಮ ಸ್ಥಳ ಇತ್ಯಾದಿಯನ್ನು ಹೊರಗೆಲ್ಲೂ ತೋರಿಸದೇ ಹೋದರೂ ತನ್ನ ಸರ್ವರ್​ನಲ್ಲೇ ಸಂಗ್ರಹಿಸಿಕೊಳ್ಳಬಹುದು. ಈ ಮಾಹಿತಿ ಕಣಜವನ್ನು ಹಣಕ್ಕಾಗಿ ಮಾರಿ, ಅವು ಆದಾಯ ಮಾಡಿಕೊಳ್ಳುತ್ತವೆ.

2. ಅನಗತ್ಯ ಯುಟಿಲಿಟಿ ಆ್ಯಪ್​ಗಳು

ಫ್ಲ್ಯಾಶ್‌ಲೈಟ್, ಕ್ಲೀನರ್ ಮತ್ತು ಬೂಸ್ಟರ್‌ನಂತಹ ಅಪ್ಲಿಕೇಶನ್‌ಗಳು ಸಹ ಅಪಾಯ ಎನಿಸುತ್ತವೆ. ಇಂದು ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಶ್‌ಲೈಟ್ ಅನ್ನು ಇನ್​ಬ್ಯುಲ್ಟ್ ಆಗಿ ಹೊಂದಿರುತ್ತವೆ. ಬೇರೆ ಬೇರೆ ಆಕರ್ಷಣೆಯೊಂದಿಗೆ ಥರ್ಡ್ ಪಾರ್ಟಿ ಫ್ಲ್ಯಾಷ್​ಲೈಟ್ ಆ್ಯಪ್​ಗಳೂ ಮಾರುಕಟ್ಟೆಯಲ್ಲಿವೆ. ಇವು ನಿಮ್ಮ ಡಾಟಾ ಕದಿಯುವ ಅವಕಾಶ ಹೆಚ್ಚು. ಇನ್ನು, ಉಚಿತವಾಗಿ ಸಿಗುವ ಕ್ಲೀನರ್ ಆ್ಯಪ್​ಗಳು ನಿಮ್ಮ ಫೋನ್ ಕ್ಲೀನಪ್ ಮಾಡುವುದರ ಜೊತೆಗೆ ಬ್ರೌಸಿಂಗ್ ಡಾಟಾದಿಂದ ಹಿಡಿದು ಹಲವಾರು ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು ಎಂಬುದು ತಜ್ಞರ ಅನಿಸಿಕೆ.

3. ಎಡಿಟಿಂಗ್ ಅಂಡ್ ಫೇಸ್ ಫಿಲ್ಟರ್ ಆ್ಯಪ್​ಗಳು

ಈಗಂತೂ ಫೇಸ್ ಫಿಲ್ಟರ್ ಆ್ಯಪ್​ಗಳು, ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಆ್ಯಪ್​ಗಳು ಜನಪ್ರಿಯವಾಗಿವೆ. ಜನರು ತಮ್ಮ ರೀಲ್ಸ್ ವಿಡಿಯೋಗಳು ಮತ್ತು ಫೋಟೋವನ್ನು ಎಡಿಟಿಂಗ್ ಮಾಡಲು ಇಂಥ ಆ್ಯಪ್​ಗಳನ್ನು ಬಳಸುವುದು ಹೆಚ್ಚಾಗಿದೆ. ನಿಮ್ಮ ಮುಖ ಚಹರೆಯ ಸೂಕ್ಷ್ಮ ಮಾಹಿತಿಯು ಈ ಆ್ಯಪ್​ಗಳ ಮೂಲಕ ಯಾವುದೋ ಸರ್ವರ್​ಗಳಲ್ಲಿ ಸ್ಟೋರ್ ಆಗಿ ಇನ್ಯಾವುದಕ್ಕಾದರೂ ಅವುಗಳ ದುರ್ಬಳಕೆ ಆಗಬಹುದು.

ಅವಶ್ಯಕವಿರುವುದಕ್ಕೆ ಮಾತ್ರವೇ ಅನುಮತಿಸಿ

ಕೆಲ ಆ್ಯಪ್​ಗಳು ಎಲ್ಲಾ ಅಕ್ಸೆಸ್​ಗಳಿಗೂ ಅನುಮತಿ ಕೇಳುತ್ತವೆ. ಫೋಟೋ, ಫೋನ್ ಕಾಲ್, ಸೆಟ್ಟಿಂಗ್ಸ್, ಕ್ಯಾಮರಾ, ಮೆಸೇಜ್, ಬ್ರೌಸಿಂಗ್ ಡಾಟಾ ಇತ್ಯಾದಿ ಎಲ್ಲಾ ಪಡೆಯಲು ಪರ್ಮಿಷನ್ ಕೇಳುತ್ತವೆ. ಒಂದು ಫೋಟೋ ಎಡಿಟಿಂಗ್ ಆ್ಯಪ್​ಗೆ ನಿಮ್ಮ ಮೆಸೇಜ್​ಗಳು ಯಾಕೆ ಬೇಕಾಗುತ್ತವೆ? ಹೀಗಾಗಿ, ಆ್ಯಪ್​ಗಳು ಪರ್ಮಿಷನ್ ಕೇಳಿದಾಗ ಎಲ್ಲದಕ್ಕೂ ಅನುಮತಿಸಬೇಡಿ. ಹಾಗೆಯೇ, ಗಮನಿಸಬೇಕಾದ ಸಂಗತಿ ಎಂದರೆ ನೀವು ಹೊಸ ಆ್ಯಪ್​ವೊಂದನ್ನು ಡೌನ್​ಲೋಡ್ ಮಾಡುತ್ತಿದ್ದರೆ ಮೊದಲು ಪ್ಲೇಸ್ಟೋರ್​ನಲ್ಲಿ ಆ ಆ್ಯಪ್​ಗೆ ರಿವ್ಯೂ ಹೇಗಿದೆ ಎಂದು ನೋಡಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries