HEALTH TIPS

ಬ್ರಿಟನ್ ಪ್ರಧಾನಿ ರಾಜೀನಾಮೆಗೆ ಹೆಚ್ಚಿದ ಒತ್ತಾಯ; ಹುದ್ದೆ ತ್ಯಜಿಸಲ್ಲ: ಸ್ಟಾರ್ಮರ್

ಲಂಡನ್: ಜೆಫ್ರಿ ಎಪ್‌ಸ್ಟೈನ್‌ ಪ್ರಕರಣದಿಂದ ಇಕ್ಕಟ್ಟಿಗೆ ಸಿಲುಕಿರುವ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರು 'ಹುದ್ದೆ ತೊರೆಯುವುದಿಲ್ಲ' ಎಂದು ಹೇಳಿದ್ದಾರೆ. 

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಜತೆ ನಂಟು ಹೊಂದಿದ್ದ ಪೀಟರ್‌ ಮ್ಯಾಂಡಲ್ಸನ್‌ ಅವರನ್ನು ಅಮೆರಿಕಕ್ಕೆ ಬ್ರಿಟನ್‌ನ ರಾಯಭಾರಿಯಾಗಿ ನೇಮಿಸಿದ್ದಕ್ಕೆ ಸ್ಟಾರ್ಮರ್‌ ಅವರು ಟೀಕೆಗೆ ಗುರಿಯಾಗಿದ್ದಾರೆ.

ಎಪ್‌ಸ್ಟೈನ್‌ ಜತೆ ನಂಟು ಹೊಂದಿದ್ದನ್ನು ತಿಳಿದಿದ್ದರೂ ಮ್ಯಾಂಡಲ್ಸನ್‌ ಅವರನ್ನು ನೇಮಿಸಿದ್ದಕ್ಕೆ ಸ್ಟಾರ್ಮರ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಲೇಬರ್‌ ಪಕ್ಷದ ನಾಯಕ ಅನಾಸ್‌ ಸರ್ವರ್‌ ಸೋಮವಾರ ಆಗ್ರಹಿಸಿದ್ದರು.

'ದೇಶದಲ್ಲಿ ಬದಲಾವಣೆ ತರುವ ಅವಕಾಶವನ್ನು ಪಡೆಯಲಿಕ್ಕಾಗಿ ತುಂಬಾ ಕಷ್ಟಪಟ್ಟು ಹೋರಾಡಿದ್ದೇನೆ. ಜನಾದೇಶ ಮತ್ತು ನನ್ನ ಜವಾಬ್ದಾರಿಯಿಂದ ಹೊರಬರಲು ಸಿದ್ಧನಿಲ್ಲ' ಎಂದು ಸ್ಟಾರ್ಮರ್ ಅವರು ಲೇಬರ್ ಪಕ್ಷದ ಸಂಸದರ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಮ್ಯಾಂಡಲ್ಸನ್‌ ಅವರ ಹೆಸರು ಕೇಳಿಬಂದ ಬೆನ್ನಲ್ಲೇ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರನ್ನು ರಾಯಭಾರಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಆದರೆ ಅಮೆರಿಕ ಸರ್ಕಾರ ಜನವರಿ 30ರಂದು ಬಿಡುಗಡೆ ಮಾಡಿದ ಎಪ್‌ಸ್ಟೈನ್‌ ದಾಖಲೆಗಳು ಈ ವಿವಾದಕ್ಕೆ ಮರುಜೀವ ನೀಡಿದೆ. ಮ್ಯಾಂಡಲ್ಸನ್ ಅವರು ಈ ಹಿಂದೆ ಸಚಿವರಾಗಿದ್ದಾಗ ಬ್ರಿಟನ್‌ ಸರ್ಕಾರದ ಗೋಪ್ಯ ಮಾಹಿತಿಗಳನ್ನು ಎಪ್‌ಸ್ಟೈನ್‌ಗೆ ಸೋರಿಕೆ ಮಾಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. 72 ವರ್ಷದ ಮ್ಯಾಂಡಲ್ಸನ್‌ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದರೂ, ಅವರನ್ನು ಇನ್ನೂ ಬಂಧಿಸಿಲ್ಲ.

ಸ್ಟಾರ್ಮರ್ ಅವರು ರಾಜೀನಾಮೆ ನೀಡಿದರೆ ಏಂಜೆಲಾ ರೇಯ್ನರ್‌ ಅಥವಾ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರು ಮುಂದಿನ ಪ್ರಧಾನಿಯಾಗುವರು ಎಂಬ ಊಹಾಪೋಹ ಎದ್ದಿತ್ತು. ಆದರೆ, ಇವರಿಬ್ಬರು ಸ್ಟಾರ್ಮರ್‌ ಅವರಿಗೆ 'ಪೂರ್ಣ ಬೆಂಬಲ' ನೀಡುತ್ತೇವೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries