HEALTH TIPS

ಕೇರಳವನ್ನು 'ಕೇರಳಂ' ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ: ವರದಿ

ನವದೆಹಲಿ: ಕೇರಳ ಸರ್ಕಾರದ ಮನವಿಯಂತೆ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. 

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಕೇರಳದಲ್ಲಿ ಚುನಾವಣೆಗಳು ಜರುಗಲಿದ್ದು, ಅದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.

2023ರ ಆಗಸ್ಟ್‌ನಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಕೇಂದ್ರ ಸರ್ಕಾರವು ಬದಲಾಯಿಸಬೇಕು ಎಂದು ಒತ್ತಾಯಿಸಿ, ಕೇರಳ ವಿಧಾನಸಭೆಯಲ್ಲಿ ಬಹುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಕೇಂದ್ರ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿದ್ದ ಕಾರಣ, 2024ರ ಜುಲೈ 24ರಂದು ಎರಡನೇ ಬಾರಿ ನಿರ್ಣಯವನ್ನು ಮಾಡಲಾಗಿತ್ತು.

ಪ್ರಧಾನ ಮಂತ್ರಿ ಕಾರ್ಯಾಲಯದ(ಪಿಎಂಒ) ಹೊಸ ಕಟ್ಟಡವಾದ ಸೇವಾತೀರ್ಥದಲ್ಲಿ ಮಂಗಳವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಕೇರಳದ ಮನವಿಯಂತೆ ಹೆಸರನ್ನು ಬದಲಾವಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ರಾಜ್ಯವನ್ನು ಮಲಯಾಳ ಭಾಷೆಯಲ್ಲಿ 'ಕೇರಳಂ' ಎಂದು ಕರೆಯಲಾಗುತ್ತದೆ. ಆದರೆ, ಸಂವಿಧಾನದಲ್ಲಿ ಕೇರಳ ಎಂದು ಬರೆಯಲಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇದ ಸೇರಿದಂತೆ ಎಲ್ಲಾ ಕಡೆಗಳಲ್ಲೂ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries