HEALTH TIPS

ಯುವಜನತೆ ಎದುರಿಸುತ್ತಿರುವ ಸವಾಲುಗಳು-ಪೆರಿಯದಲ್ಲಿ ಚರ್ಚಾ ಕಾರ್ಯಕ್ರಮ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ, ಫಯರ್ ಫ್ಲೈಸ್ ಕಮ್ಯುನಿಟಿ ಮತ್ತು ಕಮ್ಯುಟಿನಿ-ದಿ ಯೂತ್ ಕಲೆಕ್ಟಿವ್ ಸಹಯೋಗದೊಂದಿಗೆ, ಯುವಜನತೆ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಕುರಿತು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಸಮಾಜ ಕಾರ್ಯ ವಿಭಾಗದ ಅಧ್ಯಕ್ಷೆ ಡಾ. ಜಿಲ್ಲಿ ಜಾನ್ ಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಸಮುದಾಯದೊಂದಿಗೆ ಶೈಕ್ಷಣಿಕ ಸಂವಹನವು ವ್ಯಕ್ತಿ ಮತ್ತು ಸಮುದಾಯದ ಅಭಿವೃದ್ಧಿಯನ್ನು ಬಲಪಡಿಸುತ್ತದೆ. ಯುವಜನರನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಂಬಲಿಸಲು ಸಮುದಾಯ ಆಧಾರಿತ ವಿಧಾನಗಳು ಅತ್ಯಗತ್ಯ ಎಂದು ತಿಳಿಸಿದರು.  ನಜೇಲಾ ಕೆಪಿ, ಸಂಜಯ್ ಚರ್ಚೆಯ ನೇತೃತ್ವ ವಹಿಸಿದ್ದರು. 

ಭಾಗವಹಿಸುವವರು ಯುವಕರೊಂದಿಗೆ ಕೆಲಸ ಮಾಡುವಾಗ ಎದುರಿಸುವ ಸವಾಲುಗಳು ಮತ್ತು ಸಮಾಜದ ಪಾತ್ರದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಗೌತಮ್ ಸ್ವಾಗತಿಸಿ, ದೀಕ್ಷಿತ್ ವಂದಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries