HEALTH TIPS

ಸಂಭ್ರಮದೊಂದಿಗೆ ಗಡಿ ಪ್ರದೇಶದ ಪೀಸ್ ಕಾರ್ನಿವಲ್ ಮೇಘಾ ಮೇಳ ಸಂಪನ್ನ

ಮಂಜೇಶ್ವರ: ಕುಂಜತ್ತೂರು ಪೀಸ್ ಶಾಲೆಯಲ್ಲಿ ಆಯೋಜಿಸಿದ ಪೀಸ್ ಕಾರ್ನಿವಲ್ ಮೇಘಾ ಮೇಳವು ಸಹಸ್ರಾರು ಮಂದಿಯ ಪಾಲ್ಗೊಳ್ಳುವಿಕೆಯಿಂದ ಸಂಭ್ರಮ ಸಡಗರದೊಂದಿಗೆ ಸಂಪನ್ನಗೊಂಡಿತು. ಪಠ್ಯಪುಸ್ತಕಗಳ ಹೊರತಾಗಿ ವಿದ್ಯಾರ್ಥಿಗಳಿಗೆ ನೈಜ ವ್ಯಾಪಾರ ಅನುಭವ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಮೇಳದಲ್ಲಿ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಸಕ್ರಿಯವಾಗಿ ಭಾಗವಹಿಸುವಿಕೆ ವಿಶೇಷತೆಯಾಗಿತ್ತು.

ಆಹಾರ, ಆಟಿಕೆ, ಹಸ್ತಕಲಾ ಮತ್ತು ಕೈಗಾರಿಕಾ ಉತ್ಪನ್ನಗಳ ವಿವಿಧ ಸ್ಟಾಲ್‍ಗಳು ಆಕರ್ಷಕವಾಗಿದ್ದು, ವಿದ್ಯಾರ್ಥಿಗಳು ಸ್ಟಾಲ್ ನಿರ್ವಹಣೆ, ಗ್ರಾಹಕ ಸಂಪರ್ಕ, ಲೆಕ್ಕಾಚಾರ ಹಾಗೂ ಮಾರಾಟ ಕೌಶಲ್ಯಗಳಲ್ಲಿ ತಮ್ಮ ಪ್ರತಿಭೆ ತೋರಿಸಿ ಸೇರಿದ ಜನಸ್ತೋಮದ ಗಮನ ಸೆಳೆದರು.


ಪ್ರಾಂಶುಪಾಲ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ ಉದ್ಘಾಟಿಸಿದರು. ಮುಖ್ಯ ಅತಿಥಿ ನಿವೃತ್ತ ಬೆಂಗಳೂರು ಸಹಾಯಕ ಪೋಲೀಸ್ ಆಯುಕ್ತ ಟಿ. ಬಶೀರ್ ಆಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದರು. ಮೇಳದ ಯಶಸ್ಸಿಗೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪೋಷಕರ ಸಹಕಾರ ಕಾರಣವೆಂದು ಪ್ರಾಂಶುಪಾಲರು ಹೇಳಿದರು.

ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಇಲ್ಯಾಸ್ ತೂಮಿನಾಡು, ಉದ್ಯಮಿ ಅಲಿ ಕುಟ್ಟಿ ಹಾಜಿ, ಆಹ್ಮದ್ ಮಾಸ್ತರ್, ಹನೀಫ್ ಶಾರ್ಜಾ, ಡಾ. ಮೊಹಮ್ಮದ್ ರಮೀಝ್, ನೂರ್ ಜಹಾನ್ ಸ್ವಲಾಹಿಯ, ಮಹಮ್ಮದ್ ಹುಸೈನ್, ಇಸ್ಮಾಯಿಲ್ ಪಾಂಡ್ಯಾಲ್, ಮೊಹಮ್ಮದ್ ಹಾಜಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.

ಬಳಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ, ಹೃದಯಸ್ಪರ್ಶಿ ಆಚ್ಚರಿ ಕ್ಷಣ, ಸಾಂಸ್ಕøತಿಕ ಕಾರ್ಯಕ್ರಮಗಳು, ಕರಾಟೆ ಅಭ್ಯಾಸ ಸೇರಿದಂತೆ ವಿವಿಧ ಮನರಂಜನೆಗಳು ನಡೆಯಿತು. ಮತ್ತೊಂದೆಡೆ ಸಾಂಪ್ರದಾಯಿಕ ಆಟಗಳು, ಆಟದ ಮೈದಾನ ಉಪಕರಣಗಳೊಂದಿಗೆ ಪ್ಲೇ ಝೂನ್ ವಿಜ್ಞಾನ ಯೋಜನೆಗಳ ಪ್ರದರ್ಶನ, ರೇಸರ್ ಶೋ, ಅರಬಿಕ್ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಪರಂಪರೆ ಪ್ರದರ್ಶನಗಳು ನಡೆಯಿತು. ಮೇಘಾ ಮೇಳದಲ್ಲಿ ವಿದ್ಯಾರ್ಥಿಗಳು, ಪೆÇೀಷಕರು, ಅಧ್ಯಾಪಕರುಗಳು ಹಾಗೂ ಸ್ಥಳೀಯ ಹಿತೈಷಿಗಳು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries